Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ

Tuesday, August 13, 2019

Teacher's transfer

‘ಶಿಕ್ಷಕರ ವರ್ಗಾವಣೆ ಸ್ಥಗಿತಗೊಳಿಸಲ್ಲ’

ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆಯನ್ನು ಮುಖ್ಯಮಂತ್ರಿ ಸೂಚನೆ ಮೇರೆಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಆದರೆ ವರ್ಗಾವಣೆ ಪ್ರಕ್ರಿಯೆ ಯಾವ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ’ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್‌ 
ಸ್ಪಷ್ಟಪಡಿಸಿದ್ದಾರೆ.
‘ವೇಳಾಪಟ್ಟಿಯಂತೆ ಮಂಗಳ
ವಾರ ಪ್ರಾಥಮಿಕ ಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆಗೆ ಕೌನ್ಸೆಲಿಂಗ್ ನಡೆಯಬೇಕಿತ್ತು. ಕೆಲವು ವಿಷಯಗಳಲ್ಲಿ ಮುಖ್ಯಮಂತ್ರಿ ಮಾಹಿತಿ ಕೇಳಿದ್ದಾರೆ. ಅದಕ್ಕಾಗಿ ಕೌನ್ಸೆಲಿಂಗ್‌ ಅನ್ನು ತಾತ್ಕಾಲಿಕ
ವಾಗಿ ತಡೆಹಿಡಿಯಲಾಗಿದೆ. ಮಂಗಳ
ವಾರ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಯಲಿದ್ದು, ಕೆಲವು ಕಾನೂನು ತೊಡಕುಗಳ ಬಗ್ಗೆಯೂ ಚರ್ಚೆ ನಡೆಯ
ಲಿದೆ. ಮುಖ್ಯಮಂತ್ರಿ ಸೂಚನೆಯನ್ನು ಆಧರಿಸಿ ಕೌನ್ಸೆಲಿಂಗ್‌ ದಿನಾಂಕ 
ಪ್ರಕಟಿಸಲಾಗುವುದು’ ಎಂದರು.
ವರ್ಗಾವಣೆ ಸ್ಥಗಿತಗೊಳಿಸಿ
ದರೆ ಉಗ್ರ ಹೋರಾಟ ನಿಶ್ಚಿತ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ 
ಎನ್‌.ಚಂದ್ರಶೇಖರ್‌ ಎಚ್ಚರಿಸಿದ್ದಾರೆ.
‘ಜಿಲ್ಲಾ, ವಿಷಯವಾರು ಮಿತಿ ಇರಲಿ’
ಈಗಾಗಲೇ ಕೋರಿಕೆ ವರ್ಗಾವಣೆ ಕೊನೆಗೊಂಡಿದ್ದು, ಅವಕಾಶ ದೊರಕದ ಹಲವಾರು ಶಿಕ್ಷಕರು ವರ್ಗಾವಣೆ ನೀತಿಯಲ್ಲಿನ ಲೋಪದೋಷಗಳನ್ನು ಬೇಸರ
ದಿಂದಲೇ ಎತ್ತಿ ತೋರಿಸುತ್ತಿದ್ದಾರೆ. ಕಳೆದ ಬಾರಿ ಇದ್ದಂತಹ ಜಿಲ್ಲಾವಾರು, ವಿಷಯವಾರು ವರ್ಗಾವಣೆ ಕ್ರಮವೇ ಉತ್ತಮವಿತ್ತು ಎಂದು 
ಅಭಿಪ್ರಾಯಪಟ್ಟಿದ್ದಾರೆ.
‘ಕಳೆದ ಬಾರಿ ಇದ್ದಂತೆ ವೈದ್ಯಕೀಯ ನೆಲೆಯಲ್ಲಿ ವರ್ಗಾವಣೆಯನ್ನು ಪ್ರತ್ಯೇಕ
ವಾಗಿ ಇಟ್ಟು, ಉಳಿದಂತೆ ವಿಷಯವಾರು, ಮಹಿಳೆ, ಪುರುಷರಿಗೆ ಕನಿಷ್ಠ ತಲಾ 
ಶೇ 2ರಂತೆ ವರ್ಗಾವಣೆ ಮಿತಿ ಹಾಕಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ’ ಎಂದಿದ್ದಾರೆ.
3 ವರ್ಷಗಳಿಂದ ಬಾಕಿ ಉಳಿದಿದ್ದ ವರ್ಗಾವಣೆ ಪ್ರಕ್ರಿಯೆ
ಯನ್ನು ಈ ತಿಂಗಳೊಳಗೆ ಮುಗಿಸಲೇ
ಬೇಕು. ಖಾಲಿ ಹುದ್ದೆ ತೋರಿಸುವಂತೆ ಅಧಿಕಾರಿಗಳನ್ನು ಕೋರಲಾಗಿದೆ.
ಸಿ.ಎಸ್‌.ಷಡಾಕ್ಷರಿ
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

CLICK PHOT&JOIN: Karnataka government employee's News & Order's exchange Teligram GROUP

CLICK PHOT&JOIN: Karnataka government employee's News & Order's exchange Teligram GROUP
ಬಹಳ ಸದಸ್ಯರ ಒತ್ತಾಯದಮೇರೆಗೆ ಗುಂಪಿಗೆ ಮರುಚಾಲನೆ ನೀಡಲಾಗಿದೆ. ಕೆಟ್ಟ=ಟೀಕೆ,ಟಿಪ್ಪಣಿ,ಸ್ವಗತ ಇಲ್ಲಿ ನಿಷೇಧ, ಎಲ್ಲೋ ಕುಳಿತು ನಿಮ್ಮ ಬೆರಳು/ಯೋಚನೆ ಅಡ್ಮಿನ್ ನಿಯಂತ್ರಣ ಮಾಡಲು ಆಗಲ್ಲ, ಚರ್ಚಿಸುವ ಮುಂಚೆ ಯೋಚಿಸಿ ಪೋಸ್ಟ್ ಮಾಡಿ, ನೀವೂ ತೊಂದರೆಗೆ ಸಿಲುಕಬೇಡಿ, ಅಡ್ಮಿನಿಗೂ ತೊಂದರೆ ಕೊಡಬೇಡಿ. ಆರೋಗ್ಯಕರ ಚರ್ಚೆ, ಸಹಾಯ, ಸ್ನೇಹ ಗುಂಪಿನ ಗುರಿ. ಎಲ್ಲರೂ ಭಾಗವಹಿಸಲು ಪೋಸ್ಟ್ ಮಾಡುವ ಅವಕಾಶ ನೀಡಲಾಗಿದೆ. ನಿಯಮ ಮೀರುವ ಸದಸ್ಯರನ್ನು ಮುಲಾಜಿಲ್ಲದೇ ಹೊರಹಾಕಿ ಬ್ಲಾಕ್ ಮಾಡಲಾಗುವುದು ಇದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸುದ್ದಿ ಆದೇಶ ವಿನಿಮಯ ಟೆಲಿಗ್ರಾಂ ಗುಂಪಿನ ಆಹ್ವಾನ ಕೊಂಡಿ. ಮೇಲಿನ ಫೋಟೋ ಬೆರಳಿಂದ ತಟ್ಟುವ ಮುಖಾಂತರ ಗುಂಪಿಗೆ ನೀವೇ ಸೇರ್ಪಡೆ ಆಗಬಹುದು. ತಟ್ಟುವ ಮುಂಚೆ ಟೆಲಿಗ್ರಾಂ ಆಪ್ ಹಾಕಿಕೊಂಡು ತಟ್ಟಿ.