Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ

Monday, August 19, 2019

ಉಪಯುಕ್ತ ಮಾಹಿತಿ

ನಾಮನಿರ್ದೇಶನದ  ಪ್ರಾಮುಖ್ಯತೆ
------------------------------------
  ಸರ್ಕಾರಿ  ನೌಕರ  GPF , KGID , LIC , FBF , KGIS , DCRG  , Family pension , ಅಲ್ಲದೆ   SB a/c , ಮತ್ತು  FD a/c ಇತ್ಯಾದಿಗಳಿಗೆ ಎಲ್ಲದಕ್ಕೂ  ನಾಮನಿರ್ದೇಶನ( Nominee ) ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ .
ಕೇವಲ ನಾಮನಿರ್ದೇಶನ  ಮಾಡಿದರೆ  ಸಾಲದು , ಅದನ್ನು  ಸಂದರ್ಭಾನುಸಾರ  Update  ಮಾಡುತ್ತಾ ಇರಬೇಕು .
  ನಾಮನಿರ್ದೇಶನಗಳನ್ನು  ಒಬ್ಬರ  ಹೆಸರಿನಲ್ಲಿಯೇ  ಮಾಡಬೇಕೆಂದೇನೂ
ಇಲ್ಲ . ಒಬ್ಬನಿಗಿಂತ  ಹೆಚ್ಚಿನ ವ್ಯಕ್ತಿಗಳನ್ನು  ನಾಮನಿರ್ದೇಶಿತರನ್ನಾಗಿ
ಮಾಡಬಹುದು . ಹೆಚ್ಚಿನ  ವ್ಯಕ್ತಿಗಳನ್ನು ಮಾಡುವಾಗ  ತಾನು  ಮೃತಪಟ್ಟಲ್ಲಿ
ಯಾವ ವ್ಯಕ್ತಿಗಳಿಗೆ  ಎಷ್ಟೆಷ್ಟು  ಪಾಲು ಹಣ ಕೊಡಬೇಕು  ಎಂಬುದನ್ನು ಕೂಡ  ದಾಖಲಿಸಬೇಕು. ನೌಕರನ  ಕೇಂದ್ರಸ್ಥಾನ
_________________
KCSR ನಿಯಮ 513 ರ  ಪ್ರಕಾರ  ಕೇಂದ್ರ ಸ್ಥಾನ   ಎಂದರೆ   ತಾನು  ಕರ್ತವ್ಯ  ನಿರ್ವಹಿಸುವ  ಕಾರ್ಯಸ್ಥಳದಿಂದ  8 ಕಿ.ಮೀ. ದೂರವನ್ನು   ಕೇಂದ್ರ ಸ್ಥಾನ ವೆಂದು   ಕರೆಯುವರು .
8 ಕಿ. ಮೀ . ಮೀರಿ  ಬೆಳೆಸಿದ  ಪ್ರಯಾಣಕ್ಕೆ  ಪ್ರಯಾಣ ಭತ್ಯೆ  ಪಡೆಯಬಹುದು .
ಪ್ರವಾಸದ  ಕಾಲದಲ್ಲಿ  ಕೇಂದ್ರಸ್ಥಾನ ದಿಂದ 8 ಕಿ. ಮೀ .ಒಳಗೆ  ತಂಗುವುದನ್ನು  ಕೇಂದ್ರಸ್ಥಾನದಲ್ಲಿ   ತಂಗುವುದಾಗಿ ಭಾವಿಸಬೇಕು .
ದಿನದ 24 ಗಂಟೆಯೂ  ಸರ್ಕಾರಿ ನೌಕರ *

-------------------------------
K C S R ನಿಯಮಾವಳಿಯ  ನಿಯಮ  26( ಎ ) ಪ್ರಕಾರ  ಸರ್ಕಾರಿ ನೌಕರನು  ದಿನವಿಡಿ  ಅಂದರೆ 24 ಗಂಟೆಯೂ ಆತನಿಗೆ  ಸಂಬಳ ನೀಡುತ್ತಿರುವ  ಸರ್ಕಾರದ  ಕರ್ತವ್ಯಕ್ಕಾಗಿಯೇ  ಇರಬೇಕಾಗುತ್ತದೆ .

ಸರ್ಕಾರ  ರಜಾ ದಿನದಂದು  ಕರ್ತವ್ಯ ನಿರ್ವಹಿಸಲು  ಆದೇಶಿಸಿದರೆ
ಅದನ್ನು  ತಿರಸ್ಕರಿಸಲು  ಬರುವುದಿಲ್ಲ . ಉದಾಹರಣೆಗೆ  ಒಬ್ಬ  ವ್ಯಕ್ತಿಯು ಸಂಜೆ 5-30 ಕ್ಕೆ  ವಯೋ ನಿವೃತ್ತಿ  ಹೊಂದಿ ,  ಅದೇ ದಿನ ರಾತ್ರಿ   11-30ಕ್ಕೆ
ಮೃತಪಟ್ಟ ಎಂದು ಭಾವಿಸೋಣ , K C S R ನಿಯಮಾವಳಿಯ  ನಿಯಮ 8 ( 14 )ರ ಪ್ರಕಾರ  ದಿನ ಎಂದರೆ  ಮಧ್ಯರಾತ್ರಿಯಲ್ಲಿ   ಆರಂಭಗೊಳ್ಳುತ್ತದೆ
ಮತ್ತು  ಕೊನೆಗೊಳ್ಳುತ್ತದೆ .
ಏಕೆಂದರೆ , X  ಎಂಬ ನೌಕರ  ದಿನಾಂಕ 30- 09 - 1993 ರಂದು   ಸಂಜೆ 5-30 ಕ್ಕೆ ವಯೋ ನಿವೃತ್ತಿ ಹೊಂದಿ ರಾತ್ರಿ  10-30 ಕ್ಕೆ ನಿಧನರಾದರು . ಈ
KAT ಯು  ಅರ್ಜಿ ಸಂಖ್ಯೆ  : 3452 ,98 ರ  ದಿನಾಂಕ 03-09-1998 ರಂದು ಈ ವ್ಯಕ್ತಿಯು ಸೇವಾವಧಿಯಲ್ಲಿ     ಮೃತಪಟ್ಟಿರುವುದರಿಂದ
ರಾಜ್ಯ ಸರ್ಕಾರಿ ನೌಕರರ ಸಮೂಹ ವಿಮಾ ಯೋಜನೆ  ನಿಯಮಗಳು
1981 ರ ನಿಯಮ  21(2) ರ ಪ್ರಕಾರ 3 ತಿಂಗಳ ಅವಧಿಯೊಳಗೆ
ಸಮೂಹ ವಿಮಾ ಹಣವನ್ನು ಪಾವತಿಸಲು  ಆದೇಶಿಸಿದೆ . Exemption on professional  Tax
ವೃತ್ತಿ  ತೆರಿಗೆಯಿಂದ  ವಿನಾಯತಿ
~~~~~~~~~~~~~
ಸರ್ಕಾರದ   ಅಧಿಸೂಚನೆ  ಸಂಖ್ಯೆ  ಎಫ್.ಡಿ. 12
ಸಿ.ಪಿ.ಟಿ.94( ¡¡¡ )ದಿನಾಂಕ  30 - 2 - 1994 ರ  ಪ್ರಕಾರ
ಒಂದೇ  ಮಗುವಿದ್ದು  ಸಂತಾನಹರಣ   ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರಿಗೆ   ( ದಂಪತಿಗಳ  ಪೈಕಿ  ಒಬ್ಬರಲ್ಲಿ )  ದಿನಾಂಕ  01 - 04 - 1994  ರಿಂದ  ವೃತ್ತಿ  ತೆರಿಗೆ  ವಿನಾಯತಿ ನೀಡಲಾಗಿದೆ .
 ಮಹಿಳಾ  ನೌಕರರಿಗೆ  *
------------------------------------
  ಮಹಿಳಾ ನೌಕರರು   ಮದುವೆಯಾಗಿ   ಗಂಡನ ಮನೆಯಲ್ಲಿ
ವಾಸವಾಗಿದ್ದರೂ  ಸಹ  ಮಹಿಳಾ  ನೌಕರರ  ತಂದೆ - ತಾಯಿ ಈ ನೌಕರರ
ಅವಲಂಬಿತರಾಗಿದ್ದಲ್ಲಿ  ಸರ್ಕಾರದ  ಅಧಿಸೂಚನೆ  ಸಂಖ್ಯೆ ಸಿ.ಆ.ಸು.ಇ.
26/ ಎಸ್ . ಎಂ . ಆರ್ 2011 ದಿನಾಂಕ 27- 03- 2012 ರಂತೆ ಪೋಷಕರ  ಮಾಸಿಕ  ಆದಾಯ 6000/- ರೂ  ಮೀರದಿದ್ದರೆ  ಅಂತವರು ವೈದ್ಯಕೀಯ ಮರುವೆಚ್ಛ  ಪಾವತಿ ಮಾಡಿಕೊಳ್ಳುವ ಅವಕಾಶವಿದೆ.
 ಅಸಾಧಾರಣ ರಜೆ ( Extraordinary Leave )
_____________

ಸರ್ಕಾರಿ  ನೌಕರನು ಅವನ  ಹಕ್ಕಿನಲ್ಲಿ  ಯಾವುದೇ  ವಿಧವಾದ  ರಜೆ  ಇಲ್ಲದಿದ್ದಾಗ , ಅಥವಾ  ವಿಶೇಷ ಸನ್ನಿವೇಶಗಳಲ್ಲಿ  KCSR  ನಿಯಮ  117 ( ಎ ) ರ ಪ್ರಕಾರ  ಅಸಾಧಾರಣ  ರಜೆಯನ್ನು  ಪಡೆಯಬಹುದಾಗಿರುತ್ತದೆ .
        ಆದರೆ  ಈ  ಅಸಾಧಾರಣ  ರಜೆಯ  ಅವಧಿಗೆ  ಯಾವುದೇ  ವೇತನ  ಭತ್ಯೆಗಳು  ಲಭ್ಯವಾಗುವುದಿಲ್ಲ .

   ಯಾವುದೇ  ರಜೆ  ಇಲ್ಲದ  ನೌಕರರು  ಕ್ಯಾನ್ಸರ್  ,  ಕುಷ್ಠ  ,  ಕ್ಷಯ ,  ಮಾನಸಿಕ  ಅಸ್ವಸ್ಥತೆ   ಇತ್ಯಾದಿ  ಮಾರಕ  ಖಾಯಿಲೆಗಳಿಗೆ   ತುತ್ತಾದಲ್ಲಿ   ವೈದ್ಯಕೀಯ
ಪ್ರಮಾಣಪತ್ರದ  ಆಧಾರದ  ಮೇಲೆ  18 ತಿಂಗಳ  ಅವಧಿಗೆ  ಅಸಾಧಾರಣ  ರಜೆ  ಮಂಜೂರು ಮಾಡಲು ಅವಕಾಶವಿದೆ .
KCSR  ನಿಯಮ 117 ( ಬಿ )( ¡¡¡ ) ರ  ಪ್ರಕಾರ  ಸತತ ಮೂರು  ವರ್ಷ  ಸೇವೆ  ಸಲ್ಲಿಸಿದ  ನೌಕರರಿಗೆ  ಉನ್ನತ ವ್ಯಾಸಂಗಕ್ಕೆ  2 ವರ್ಷ , ಡಾಕ್ಟರೇಟ್  ಕೋರ್ಸ್ ಗಾಗಿ 3 ವರ್ಷಅಸಾಧಾರಣ  ರಜೆ  ಪಡೆಯಲು ಅವಕಾಶವಿದೆ .ರಿಮೂವಲ್ -  ಡಿಸ್ಮಿಸಲ್ ಗೂ  ಇರುವ  ವ್ಯತ್ಯಾಸ  ? ?
_________________
ರಿಮೂವಲ್ ( ಕೆಲಸದಿಂದ  ತೆಗೆದುಹಾಕುವುದು).  ಯಾವುದೇ  ಆರ್ಥಿಕ ಸೌಲಭ್ಯವೂ  ದೊರೆಯುವುದಿಲ್ಲ , ಆದರೆ  ಮತ್ತೊಂದು  ಹುದ್ದೆಗೆ
ಆಯ್ಕೆಯಾಗಬಹುದು .
ಆದರೆ  ಡಿಸ್ಮಿಸಲ್ ( ಕೆಲಸದಿಂದ  ವಜಾ ಮಾಡುವುದು ) . ಈ ಆದೇಶವಾದಾಗ  ಆರ್ಥಿಕ  ಸೌಲಭ್ಯವೂ  ಸಿಗುವುದಿಲ್ಲ , ಹಾಗು  ಬೇರೆ ಹುದ್ದೆಗೆ
ನೇಮಕಾತಿಯು  ಸಿಗುವುದಿಲ್ಲ .ಅಮಾನತ್ತು  ( Suspension )
________________
1)ಒಬ್ಬ ನೌಕರರನ್ನು  ಅಮಾನತ್ತು ಮಾಡುವಾಗ ಮುಂಚಿತವಾಗಿ ನೋಟೀಸು ಕೊಡಬೇಕೆಂದು ನಿಯಮವಿಲ್ಲ .
2) ಅಮಾನತ್ತು ಅವಧಿಯಲ್ಲಿ ಕಡ್ಡಾಯವಾಗಿ ಶೇಕಡಾ 50% ಜೀವನಾಧಾರ ಭತ್ಯೆ  ಕೊಡಬೇಕು .
3) ಅಮಾನತ್ತನ್ನು  ಗರಿಷ್ಠ 6 ತಿಂಗಳೊಳಗಾಗಿ  ಅಂತಿಮ  ಆದೇಶ ಹೊರಡಿಸಬೇಕು . ಮುಂದುವರಿಸಬೇಕಾದರೆ ಸರ್ಕಾರಕ್ಕೆ  ವರದಿ ಸಲ್ಲಿಸಬೇಕು .
4) ಯಾವುದಾದರೂ  ಕಾರಣದಿಂದ 48 ಗಂಟೆ ಮೀರಿದ  ಅವಧಿಯವರಿಗೆ ಅಭಿರಕ್ಷೆಯಲ್ಲಿ  ( ಪೋಲಿಸ್ ಕಷ್ಟಡಿ ) ತಡೆಹಿಡಿದಿದ್ದರೆ  ಸ್ವಯಂಚಾಲಿತವಾಗಿ  ಅಮಾನತ್ತು ಜಾರಿಯಾಗುತ್ತದೆ .
5)  ವಿಚಾರಣೆ  ಬಾಕಿ ಇರುವಾಗ ನೌಕರರನನ್ನು  ಅಮಾನತ್ತುಗೊಳಿಸಬಹುದು. ಆದರೆ,  ಅಮಾನತ್ತು ದಂಡನೆ  ಅಲ್ಲ.
6) ತಿಂಗಳಿಗೂ  ಮೀರಿದ ಅವಧಿಗೆ  ಅಮಾನತ್ತು ಮುಂದುವ ರಿದ ಪ್ರಕರಣಕ್ಕೆ ಶೇಕಡಾ 75% ,  ಹಾಗು ವರ್ಷಕ್ಕೂ  ಮೀರಿದ ಅವಧಿಗೆ  ಶೇ100% ರಷ್ಟು ಸಂಬಳ ಪಾವತಿಸಬೇಕು .
7) ಅಮಾನತ್ತಾದ  ನೌಕರ  ವಿಚಾರಣೆಯಿಂದ  ಆರೋಪ ಮುಕ್ತನಾದಲ್ಲಿ  ಪೂರ್ಣ  ವೇತನ  ನೀಡಬೇಕು .
8 ) ಅಮಾನತ್ತು ನಂತರ ಶಿಸ್ತು ನಡವಳಿಕೆ  ನಡೆಸದಿದ್ದಲ್ಲಿ  ಅದು  ನ್ಯಾಯಸಮ್ಮತವಲ್ಲ .
9 ) ಲಘು ದಂಡನೆ  ವಿಧಿಸುವುದೊಂದಿಗೆ  ಅಮಾನತ್ತು ಅವಧಿ ಕೊನೆಗೊಂಡಾಗ ಈ ಅವಧಿಗೆ  ಪೂರ್ಣ ವೇತನ  ಮತ್ತು ಭತ್ಯೆಗಳನ್ನು ಕೊಡಬೇಕು .
10 ) ' ಬಿ ' ಗುಂಪಿನ  ಅಧಿಕಾರಿಗಳನ್ನು  ಅಮಾನತ್ತುಗೊಳಿಸುವ  ಅಧಿಕಾರ - ಜಿಲ್ಲಾಧಿಕಾರಿ  ಮತ್ತು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ  ಅಧಿಕಾರ ಇರುವುದಿಲ್ಲ .

CLICK PHOT&JOIN: Karnataka government employee's News & Order's exchange Teligram GROUP

CLICK PHOT&JOIN: Karnataka government employee's News & Order's exchange Teligram GROUP
ಬಹಳ ಸದಸ್ಯರ ಒತ್ತಾಯದಮೇರೆಗೆ ಗುಂಪಿಗೆ ಮರುಚಾಲನೆ ನೀಡಲಾಗಿದೆ. ಕೆಟ್ಟ=ಟೀಕೆ,ಟಿಪ್ಪಣಿ,ಸ್ವಗತ ಇಲ್ಲಿ ನಿಷೇಧ, ಎಲ್ಲೋ ಕುಳಿತು ನಿಮ್ಮ ಬೆರಳು/ಯೋಚನೆ ಅಡ್ಮಿನ್ ನಿಯಂತ್ರಣ ಮಾಡಲು ಆಗಲ್ಲ, ಚರ್ಚಿಸುವ ಮುಂಚೆ ಯೋಚಿಸಿ ಪೋಸ್ಟ್ ಮಾಡಿ, ನೀವೂ ತೊಂದರೆಗೆ ಸಿಲುಕಬೇಡಿ, ಅಡ್ಮಿನಿಗೂ ತೊಂದರೆ ಕೊಡಬೇಡಿ. ಆರೋಗ್ಯಕರ ಚರ್ಚೆ, ಸಹಾಯ, ಸ್ನೇಹ ಗುಂಪಿನ ಗುರಿ. ಎಲ್ಲರೂ ಭಾಗವಹಿಸಲು ಪೋಸ್ಟ್ ಮಾಡುವ ಅವಕಾಶ ನೀಡಲಾಗಿದೆ. ನಿಯಮ ಮೀರುವ ಸದಸ್ಯರನ್ನು ಮುಲಾಜಿಲ್ಲದೇ ಹೊರಹಾಕಿ ಬ್ಲಾಕ್ ಮಾಡಲಾಗುವುದು ಇದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸುದ್ದಿ ಆದೇಶ ವಿನಿಮಯ ಟೆಲಿಗ್ರಾಂ ಗುಂಪಿನ ಆಹ್ವಾನ ಕೊಂಡಿ. ಮೇಲಿನ ಫೋಟೋ ಬೆರಳಿಂದ ತಟ್ಟುವ ಮುಖಾಂತರ ಗುಂಪಿಗೆ ನೀವೇ ಸೇರ್ಪಡೆ ಆಗಬಹುದು. ತಟ್ಟುವ ಮುಂಚೆ ಟೆಲಿಗ್ರಾಂ ಆಪ್ ಹಾಕಿಕೊಂಡು ತಟ್ಟಿ.