Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ

Saturday, January 7, 2017

How to calculate income tax

"ಆದಾಯ ತೆರಿಗೆ ಮಿತಿ ಹಾಗೂ ತೆರಿಗೆ ಕೊಡಬೇಕಾದ ವಿವರ"
- Kiran Raghupathi, VP, KSPSTA

#ವೈಯಕ್ತಿಕ_ಆದಾಯ_ತೆರಿಗೆ (60 ವರ್ಷ ಒಳಗಿನ ವ್ಯಕ್ತಿಗಳು):

₹ 2.50 ಲಕ್ಷ ತನಕ ಸಂಪೂರ್ಣ ವಿನಾಯಿತಿ

₹ 2.50 ಲಕ್ಷದಿಂದ ₹ 5  ಲಕ್ಷಗಳ ತನಕ ₹ 2.50 ಲಕ್ಷ ದಾಟಿದ ಮೊತ್ತಕ್ಕೆ ಶೇ 10

₹ 5  ಲಕ್ಷದಿಂದ ₹10  ಲಕ್ಷಗಳ ತನಕ ₹25,000 + ಶೇ 20 ₹5  ಲಕ್ಷ ದಾಟಿದ ಮೊತ್ತಕ್ಕೆ

₹ 10 ಲಕ್ಷ ದಾಟಿದ  ಮೊತ್ತಕ್ಕೆ ₹1.20 ಲಕ್ಷ + ಶೇ 30 ₹10  ಲಕ್ಷ ದಾಟಿದ ಮೊತ್ತಕ್ಕೆ

#60_ವರ್ಷ_ದಾಟಿದ_ಮತ್ತು_80_ವರ್ಷ_ಒಳಗಿನ_ವ್ಯಕ್ತಿಗಳು:

₹3  ಲಕ್ಷದ ತನಕ ಸಂಪೂರ್ಣ ವಿನಾಯ್ತಿ

₹3  ಲಕ್ಷದಿಂದ ₹5  ಲಕ್ಷಗಳ ತನಕ ₹3 ಲಕ್ಷ ದಾಟಿದ ಮೊತ್ತಕ್ಕೆ ಶೇ10

₹5  ಲಕ್ಷದಿಂದ ₹10  ಲಕ್ಷಗಳ ತನಕ ₹20,000 + ಶೇ 20 ₹ 5 ಲಕ್ಷ ದಾಟಿದ ಮೊತ್ತಕ್ಕೆ

₹10.00 ಲಕ್ಷ ದಾಟಿದ ಮೊತ್ತಕ್ಕೆ ₹1.20 ಲಕ್ಷ + ಶೇ 30 ₹10 ಲಕ್ಷ ದಾಟಿದ ಮೊತ್ತಕ್ಕೆ

#80_ವರ್ಷ_ದಾಟಿದ_ವ್ಯಕ್ತಿಗಳು:

₹ 5 ಲಕ್ಷಗಳ ತನಕ ಸಂಪೂರ್ಣ ವಿನಾಯ್ತಿ
₹ 5 ಲಕ್ಷದಿಂದ – ₹ 10 ಲಕ್ಷಗಳ ತನಕ ₹5.00 ಲಕ್ಷ ದಾಟಿದ ಮೊತ್ತಕ್ಕೆ ಶೇ 20
₹ 10  ಲಕ್ಷ ದಾಟಿದ ಮೊತ್ತಕ್ಕೆ ₹1  ಲಕ್ಷ + ಶೇ 30 ₹ 10  ಲಕ್ಷ ದಾಟಿದ ಮೊತ್ತಕ್ಕೆ.

#ಸರ್‌ಚಾರ್ಜ್‌:
ವಾರ್ಷಿಕ ₹ 1 ಕೋಟಿ ಆದಾಯ ಇರುವವರು ಮಾತ್ರ ಆದಾಯ ತೆರಿಗೆ ಹೊರತುಪಡಿಸಿ, ಶೇ 10 ಸರ್‌ಚಾರ್ಜ್‌ ಕೊಡತಕ್ಕದ್ದು.

#ಶಿಕ್ಷಣ_ಸೆಸ್‌:
ಆದಾಯ ತೆರಿಗೆಯ ಮೇಲೆ ಶೇ 3ರಷ್ಟು  ಶಿಕ್ಷಣ ಉಪ ಕರ ಕೊಡತಕ್ಕದ್ದು.
ಈ ತೆರಿಗೆ ಎಲ್ಲಾ ವರ್ಗದವರಿಗೂ ಅನ್ವಯಿಸುತ್ತದೆ.

ನೌಕರಿಯಲ್ಲಿ ದೊರೆಯುವ ಸಂಬಳದ ಹೊರತಾಗಿ ಪಡೆಯುವ ಭತ್ಯೆ ಹಾಗೂ ವೆಚ್ಚಗಳಿಗಾಗಿ ಪಡೆಯುವ ಹಣ ಇವುಗಳ ವಿನಾಯತಿ

#ಸೆಕ್ಷನ್_‌10 (10ಸಿ) ಸ್ವಯಂ ನಿವೃತ್ತಿ  (Voluntrary Retirement) ಸರ್ಕಾರ ಅಥವಾ ಸಂಸ್ಥೆ ಸ್ವಯಂ ನಿವೃತ್ತಿ ಯೋಜನೆ ಘೋಷಿಸಿದಾಗ (Rule 2BA of I.T. Rules) ಗರಿಷ್ಠ ₹ 5 ಲಕ್ಷ ತನಕ, ಇಲ್ಲಿ ಬಂದ ಮೊತ್ತಕ್ಕೆ ಆದಾಯ ತೆರಿಗೆ ವಿನಾಯತಿ ಪಡೆಯಬಹುದು.

#ಸೆಕ್ಷನ್‌_10 (13ಎ) ಮನೆ ಬಾಡಿಗೆ ಭತ್ಯೆ ಪಡೆದಾಗ:
ಎ) ನಿಜವಾಗಿ ಸಿಕ್ಕಿರುವ ಮನೆಬಾಡಿಗೆ
ಬಿ) ಸಂಬಳದ ಶೇ 10 ರಷ್ಟು ಬಾಡಿಗೆ ಕೊಟ್ಟಾಗ
ಸಿ) ಶೇ 40 ರಷ್ಟು ಸಂಬಳ (ಮಹಾನಗರಗಳಲ್ಲಿ ಶೇ 50)
ಮೇಲಿನವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಆರಿಸಿಕೊಳ್ಳಿ.

#ಸೆಕ್ಷನ್‌_10(ಜಿಜಿ) ಮನೆಬಾಡಿಗೆ ಭತ್ಯೆ ಪಡೆಯದೆ ಬಾಡಿಗೆ ಕೊಡುತ್ತಿರುವಲ್ಲಿ:
ಎ) ಆದಾಯದ ಶೇ 25ರಷ್ಟು
ಬಿ) ಶೇ 10 ಆದಾಯದಷ್ಟು ಬಾಡಿಗೆ ಕೊಟ್ಟಾಗ
ಸಿ) ₹ 2000 ತಿಂಗಳಿಗೆ
ಮೇಲಿನವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಆರಿಸಿಕೊಳ್ಳಿ.

#ಸೆಕ್ಷನ್‌_10(14)  ಕರ್ತವ್ಯಕ್ಕಾಗಿ ತಿರುಗಾಟಕ್ಕೆ ಕೊಡುವ ಭತ್ಯೆ

#ಸೆಕ್ಷನ್‌_10(14) ಸಾರಿಗೆ ಭತ್ಯೆ: ಕನ್ವೆಯನ್ಸ ಅಲೊವೆನ್ಸ್‌ನ ಹಾಗೆ ಮನೆಯಿಂದ ಕಚೇರಿಗೆ– ಕಚೇರಿಯಿಂದ ಮನೆಗೆ ಬರಲು ಕೊಡುವ ಭತ್ಯೆ –ಗರಿಷ್ಠ ₹ 800

#ವೈದ್ಯಕೀಯ_ಖರ್ಚು (ಸೆಕ್ಷನ್‌ 17(2) ಗರಿಷ್ಠ ₹ 15,000 ಉದ್ಯೋಗದಾತರು ಭರಿಸಿದಾಗ.

#ಪ್ರೊಷೇಷನ್‌_ಟ್ಯಾಕ್ಸ್‌:
ಸಂಪೂರ್ಣ ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.

#ಸೆಕ್ಷನ್‌_24(ಎ): ಬಾಡಿಗೆಗೆ ಬೇರೆಯವರಿಗೆ ಮನೆ ಕೊಟ್ಟಾಗ, ಒಟ್ಟು ಬಾಡಿಗೆಯ ಶೇ  30 ಕಳೆದು ತೆರಿಗೆ ಸಲ್ಲಿಸಬಹುದು. (ದುರಸ್ತ, ವಿಮೆ ತೆರಿಗೆ ಇತ್ಯಾದಿ ಬಾಡಿಗೆಯಿಂದ ಕಡಿತ ಮಾಡುವಂತಿಲ್ಲ.)

#ಸೆಕ್ಷನ್‌_24(ಬಿ) ಗೃಹಸಾಲದ ಬಡ್ಡಿ ಗರಿಷ್ಠ ₹ 2  ಲಕ್ಷ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.

ಬಂಡವಾಳ ಲಾಭ ತೆರಿಗೆ (Capital Gain Tax)
ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಸೆಕ್ಷನ್‌ 48 ಆಧಾರದ ಮೇಲೆ– ಚಿನ್ನದ ಬಾಂಡುಗಳು ಹಳ್ಳಿ ವ್ಯವಸಾಯದ ಭೂಮಿ ಹಾಗೂ ಸ್ವಂತ ಉಪಯೋಗದ ಒಡವೆಗಳಿಗೆ ಅನ್ವಯಸುವುದಿಲ್ಲ. ಸೆಕ್ಷನ್‌ 54EC ಆಧಾರದ ಮೇಲೆ ಗರಿಷ್ಠ ₹ 50  ಲಕ್ಷ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ಗ್ರಾಮೀಣ ವಿದ್ಯುದ್ದೀಕರಣ ನಿಗಮ ನ್ಯಾಷನಲ್‌ ಹೈವೇಸ್‌ ಅಥಾರಿಟಿ ಆಫ್‌ ಇಂಡಿಯಾ ಅಥವಾ ರೂರಲ್‌ ಎಲೆಕ್ಟ್ರಿಫಿಕೇಷನ್‌ ಕಾರ್ಪರೇಷನ್‌ ಇವುಗಳಲ್ಲಿ 3 ವರ್ಷಗಳ ಅವಧಿಗೆ ಇರಿಸಿ, ತೆರಿಗೆ ವಿನಾಯತಿ ಪಡೆಯಬಹುದು.

#ವಿಶೇಷ_ಸೂಚನೆ:
ಕ್ಯಾಪಿಟಲ್‌ಗೇನ್‌ ಟ್ಯಾಕ್ಸ್‌ ಲೆಕ್ಕ ಹಾಕುವಾಗ, ಬರುವ ಲಾಭದಲ್ಲಿ ಹಣದುಬ್ಬರ ಸೂಚ್ಯಂಕ ವೆಚ್ಚದ (Cost Inflation Index) ಕಳೆದು ತೆರಿಗೆ ಸಲ್ಲಿಸಬಹುದು. 1981–82 ಆಧಾರ ವರ್ಷ (100) ಎಂಬುದಾಗಿ ಇಟ್ಟುಕೊಂಡಲ್ಲಿ 2014–15ರಲ್ಲಿ ಇದು 1024 ಆಗಿರುತ್ತದೆ.

CLICK PHOT&JOIN: Karnataka government employee's News & Order's exchange Teligram GROUP

CLICK PHOT&JOIN: Karnataka government employee's News & Order's exchange Teligram GROUP
ಬಹಳ ಸದಸ್ಯರ ಒತ್ತಾಯದಮೇರೆಗೆ ಗುಂಪಿಗೆ ಮರುಚಾಲನೆ ನೀಡಲಾಗಿದೆ. ಕೆಟ್ಟ=ಟೀಕೆ,ಟಿಪ್ಪಣಿ,ಸ್ವಗತ ಇಲ್ಲಿ ನಿಷೇಧ, ಎಲ್ಲೋ ಕುಳಿತು ನಿಮ್ಮ ಬೆರಳು/ಯೋಚನೆ ಅಡ್ಮಿನ್ ನಿಯಂತ್ರಣ ಮಾಡಲು ಆಗಲ್ಲ, ಚರ್ಚಿಸುವ ಮುಂಚೆ ಯೋಚಿಸಿ ಪೋಸ್ಟ್ ಮಾಡಿ, ನೀವೂ ತೊಂದರೆಗೆ ಸಿಲುಕಬೇಡಿ, ಅಡ್ಮಿನಿಗೂ ತೊಂದರೆ ಕೊಡಬೇಡಿ. ಆರೋಗ್ಯಕರ ಚರ್ಚೆ, ಸಹಾಯ, ಸ್ನೇಹ ಗುಂಪಿನ ಗುರಿ. ಎಲ್ಲರೂ ಭಾಗವಹಿಸಲು ಪೋಸ್ಟ್ ಮಾಡುವ ಅವಕಾಶ ನೀಡಲಾಗಿದೆ. ನಿಯಮ ಮೀರುವ ಸದಸ್ಯರನ್ನು ಮುಲಾಜಿಲ್ಲದೇ ಹೊರಹಾಕಿ ಬ್ಲಾಕ್ ಮಾಡಲಾಗುವುದು ಇದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸುದ್ದಿ ಆದೇಶ ವಿನಿಮಯ ಟೆಲಿಗ್ರಾಂ ಗುಂಪಿನ ಆಹ್ವಾನ ಕೊಂಡಿ. ಮೇಲಿನ ಫೋಟೋ ಬೆರಳಿಂದ ತಟ್ಟುವ ಮುಖಾಂತರ ಗುಂಪಿಗೆ ನೀವೇ ಸೇರ್ಪಡೆ ಆಗಬಹುದು. ತಟ್ಟುವ ಮುಂಚೆ ಟೆಲಿಗ್ರಾಂ ಆಪ್ ಹಾಕಿಕೊಂಡು ತಟ್ಟಿ.