Esma for police strike
vijayavani clipping
ಪ್ರತಿಭಟನೆ ನಡೆಸಿದರೆ ಕೆಲಸದಿಂದ ಡಿಸ್ಮಿಸ್
- ರಾಜ್ಯದ ಎಲ್ಲ ಠಾಣೆಗಳಿಗೆ ಡಿಜಿಪಿ ಸುತ್ತೋಲೆ
ಕೀರ್ತಿನಾರಾಯಣ ಸಿ.
ಬೆಂಗಳೂರು: ಇಲಾಖೆಯನ್ನು ಮುಜುಗರಕ್ಕೆ ಸಿಲುಕಿಸಿ ರಾಜ್ಯ ಪೊಲೀಸರು ಜೂನ್ 4ರಂದು ಹಮ್ಮಿಕೊಂಡಿರುವ ಪ್ರತಿಭಟನೆಯನ್ನು ಹತ್ತಿಕ್ಕಲೇಬೇಕೆಂದು ಪಣತೊಟ್ಟಿರುವ ಸರ್ಕಾರ ಅಂತಿಮವಾಗಿ ವಜಾಸ ಪ್ರಯೋಗಕ್ಕೆ ತೀರ್ಮಾನಿಸಿದೆ.
ಪ್ರತಿಭಟನೆಗೆ ಕರೆ ನೀಡಿರುವ ಜೂನ್ 4ರಂದು ಕರ್ತವ್ಯಕ್ಕೆ ರಜೆ ಹಾಕುವ ಅಥವಾ ಗೈರು ಹಾಜರಾಗುವ ಪೊಲೀಸರ ಮೇಲೆ ಕಾನೂನಿನ ಅಸ ಬಳಸಿಕೊಂಡು ಅವರನ್ನು ವಜಾಗೊಳಿಸಿ ಮನೆಗೆ ಕಳುಹಿಸುವ ಕುರಿತಂತೆ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಸೋಮವಾರ ರಾಜ್ಯದ ಎಲ್ಲ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಎಸ್ಪಿಗಳಿಗೆ ಸುತ್ತೋಲೆ ರವಾನಿಸಿದ್ದಾರೆ.
ಹಳೆಯ ಅಸ್ತ್ರ: 1982ರಲ್ಲಿ ಮುಂಬೈನಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದ ಪೊಲೀಸರ ಮೇಲೆ ಪ್ರಯೋಗಿಸಿದ್ದ ಕಾನೂನು ಅಸ್ತ್ರವನ್ನೇ ರಾಜ್ಯದಲ್ಲೂ ಪ್ರಯೋಗಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ. ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಪ್ರತಿಭಟನೆಗೆ ಸಿದ್ಧರಾಗಿದ್ದ 1000 ಕ್ಕೂ ಹೆಚ್ಚು ಪೊಲೀಸರನ್ನು ಪೂರ್ವ ವಿಚಾರಣೆ ಇಲ್ಲದೆ ಆಗಿನ ಮುಂಬೈ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ವರಿಷ್ಠಾಧಿಕಾರಿ ಸೇವೆಯಿಂದ ವಜಾಗೊಳಿಸಿದ್ದರು. ವಜಾ ಆದೇಶ ಪ್ರಶ್ನಿಸಿ ಸಿಬ್ಬಂದಿ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದರಾದರೂ ಅರ್ಜಿ ತಿರಸ್ಕೃತವಾಗಿತ್ತು.
ಎಸ್ಪಿಗಳ ಜತೆ ಮಾತುಕತೆ
ನೃಪತುಂಗ ರಸ್ತೆಯಲ್ಲಿರುವ ಡಿಜಿಪಿ ಕಚೇರಿಯಿಂದ ಸೋಮವಾರ ಇಡೀ ದಿನ ರಾಜ್ಯದ ಎಲ್ಲ ಎಸ್ಪಿಗಳ ಜತೆ ವಿಡಿಯೋ ಕಾನರೆನ್ಸ್ ಮೂಲಕ ಡಿಜಿಪಿ ಓಂಪ್ರಕಾಶ್ ಮಾತುಕತೆ ನಡೆಸಿದರು. ರಜೆ ಹಾಕದಂತೆ ಮನವೊಲಿಕೆ ಹಾಗೂ ಕೇಳದಿದ್ದರೆ ನಂತರ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ದೇಶನ ಕೊಟ್ಟಿದ್ದಾರೆ. ಎಲ್ಲ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಶಿಸ್ತು ಕ್ರಮ ತೆಗೆದುಕೊಳ್ಳಲು ರಾಜ್ಯದ ಎಲ್ಲ ಠಾಣೆಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಕರ್ತವ್ಯಕ್ಕೆ ರಜೆ ಹಾಕಿ ಅಥವಾ ಗೈರು ಹಾಜರಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದರೆ ಅಂಥವರನ್ನು ಸೇವೆಯಿಂದ ವಜಾ ಮಾಡಲಾಗುತ್ತದೆ.
| ಓಂಪ್ರಕಾಶ್ ಡಿಜಿಪಿ