Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ
Sunday, January 12, 2020
Friday, January 10, 2020
Thursday, January 9, 2020
promotion to teachers
C Kannada News Now
ಬಿಇಡಿಬಿ/ಬಿಪಿಎಡ್ಧವೀದರ ಪ್ರಾಥಮಿಕ ಶಾಲಾ ಶಿಕ್ಷಕರೇ ಗಮನಿಸಿ : ಬಡ್ತಿಗಾಗಿ ಹೆಸರು ಸೇರ್ಪಡೆಗೊಳಿಸಿ
ಕಲಬುರಗಿ : 2019ನೇ ಬ್ಲಾಕ್ ಅವಧಿಗೆ ಕಲಬುರಗಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ.ಇಡಿ./ಬಿ.ಪಿ.ಇಡಿ. ತರಬೇತಿ ಹೊಂದಿದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ಹಾಗೂ ದೈಹಿಕ ಶಿಕ್ಷಕ ಶಿಕ್ಷಕರ ಗ್ರೇಡ್-1 ಹುದ್ದೆಗೆ ಬಡ್ತಿ ನೀಡಲು ಜೇಷ್ಠತಾ ಪಟ್ಟಿ ಸಿದ್ಧಪಡಿಸಬೇಕಾಗಿದೆ. ಇದಕ್ಕಾಗಿ ಅರ್ಹ ಶಿಕ್ಷಕರು ನಿಗದಿತ ನಮೂನೆಯಲ್ಲಿ ಪ್ರಸ್ತಾವನೆ ಸಲ್ಲಿಸಬೇಕೆಂದು ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
2019ರ ಜನವರಿ 1 ರಿಂದ ಡಿಸೆಂಬರ್ 31 ರ ಮಧ್ಯದ ಅವಧಿಯಲ್ಲಿ ಬಿ.ಇಡಿ./ಬಿ.ಪಿ.ಇಡಿ. ತರಬೇತಿ ಹೊಂದಿದ ಶಿಕ್ಷಕರು ಜೇಷ್ಠತಾ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಪ್ರಸ್ತಾವನೆಗಳನ್ನು ನಿಗದಿತ ನಮೂನೆಯಲ್ಲಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ 2020ರ ಜನವರಿ 17 ರೊಳಗಾಗಿ ಸಲ್ಲಿಸಬೇಕು.
2018ನೇ ಬ್ಲಾಕ್ ಅವಧಿಗೆ ಜೇಷ್ಠತಾ ಪಟ್ಟಿಯಲ್ಲಿ ಸೇರಿಸುವ ಶಿಕ್ಷಕರು ಪುನ: ಪ್ರಸ್ತಾವನೆ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಕೇವಲ 2019ರ ಜನವರಿ 1 ರಿಂದ ಡಿಸೆಂಬರ್ 31 ರ ಮಧ್ಯದ ಅವಧಿಯಲ್ಲಿ ಬಿ.ಇಡಿ./ಬಿ.ಪಿ.ಇಡಿ. ವಿದ್ಯಾರ್ಹತೆ ಪಡೆದಿರುವ ಶಿಕ್ಷಕರು ಮಾತ್ರ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.
Monday, January 6, 2020
Thursday, January 2, 2020
School Holidays list
Career India
2020ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ನೀಡಲಾಗುವ ರಜೆ ದಿನಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ರಜೆಗಳ ವಿಶೇಷತೆ ಮತ್ತು ದಿನಾಂಕದ ಮಾಹಿತಿಯನ್ನು ತಿಳಿಸಲಾಗಿರುತ್ತದೆ.
ಶಿಕ್ಷಣ ಇಲಾಖೆಯು ಅಧಿಕೃತ ರಜಾ ದಿನಗಳ ಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದ ನಂತರ ಏನಾದರು ಬದಲಾವಣೆಗಳಿದ್ದಲ್ಲಿ ಅಪ್‌ಡೇಟ್ ನೀಡುತ್ತೇವೆ.
ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ 2020ರ ರಜಾ ದಿನಗಳ ಪಟ್ಟಿ:
ಕ್ರಮ ಸಂಖ್ಯೆ | ರಜೆ ವಿಶೇಷತೆ | ದಿನಾಂಕ |
1 | ಮಕರ ಸಂಕ್ರಾಂತಿ | 15-01-2020 |
2 | ಗಣರಾಜ್ಯೋತ್ಸವ | 26-01-2020 |
3 | ಮಹಾಶಿವರಾತ್ರಿ | 21-02-2020 |
4 | ಯುಗಾದಿ | 25-03-2020 |
5 | ಮಹಾವೀರ ಜಯಂತಿ | 06-04-2020 |
6 | ಗುಡ್ ಫ್ರೈಡೆ | 10-04-2020 |
7 | ಡಾ. ಅಂಬೇಡ್ಕರ್ ಜಯಂತಿ | 14-04-2020 |
8 | ಬಸವ ಜಯಂತಿ | 26-04-2020 |
9 | ಮೇ ದಿನ (ಕಾರ್ಮಿಕರ ದಿನಾಚರಣೆ) | 01-05-2020 |
10 | ಈದ್ ಉಲ್ ಫಿತ್ತರ್ | 24-05-2020 |
11 | ಬಕ್ರೀದ್ | 31-07-2020 |
12 | ಸ್ವಾತಂತ್ರ್ಯ ದಿನಾಚರಣೆ | 15-08-2020 |
13 | ಗಣೇಶ ಚತುರ್ಥಿ | 22-08-2020 |
14 | ಮೊಹರಂ ಕಡೆ ದಿನ | 29-08-2020 |
15 | ಮಹಾಲಯ ಅಮಾವಾಸ್ಯೆ | 17-09-2020 |
16 | ಗಾಂಧಿ ಜಯಂತಿ | 02-10-2020 |
17 | ಮಹಾನವಮಿ, ಆಯುಧಪೂಜಾ | 25-10-2020 |
18 | ವಿಜಯದಶಮಿ | 26-10-2020 |
19 | ಈದ್ ಮಿಲಾದ್ | 30-10-2020 |
20 | ವಾಲ್ಮಿಕಿ ಜಯಂತಿ | 31-10-2020 |
21 | ಕನ್ನಡ ರಾಜ್ಯೋತ್ಸವ | 01-11-2020 |
22 | ದೀಪಾವಳಿ | 14-11-2020 |
23 | ಕನಕದಾಸ ಜಯಂತಿ | 03-12-2020 |
24 | ಕ್ರಿಸ್‌ಮಸ್ | 25-12-2020 |