2020 ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ, ಭಾನುವಾರ ರಜೆ ಇರುತ್ತದೆ.
ಜನವರಿ 15 : ಬುಧವಾರ, ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
ಫೆಬ್ರವರಿ 21 : ಶುಕ್ರವಾರ, ಮಹಾ ಶಿವರಾತ್ರಿ
ಮಾರ್ಚ್ 25 : ಬುಧವಾರ, ಯುಗಾದಿ
ಏಪ್ರಿಲ್ 6 : ಸೋಮವಾರ, ಮಹಾವೀರ ಜಯಂತಿ
ಏಪ್ರಿಲ್ 10 : ಶುಕ್ರವಾರ, ಗುಡ್ ಫ್ರೈಡೆ
ಏಪ್ರಿಲ್ 14 : ಮಂಗಳವಾರ, ಅಂಬೇಡ್ಕರ್ ಜಯಂತಿ
ಮೇ 1 : ಶುಕ್ರವಾರ, ಕಾರ್ಮಿಕ ದಿನಾಚರಣೆ
ಮೇ 25 : ಸೋಮವಾರ, ರಂಜಾನ್
ಆಗಸ್ಟ್ 1 : ಶನಿವಾರ, ಬಕ್ರಿದ್
ಆಗಸ್ಟ್ 15 : ಶನಿವಾರ, ಸ್ವಾತಂತ್ರ್ಯ ದಿನಾಚರಣೆ
ಸೆಪ್ಟೆಂಬರ್ 17 : ಗುರುವಾರ, ಮಹಾಲಯ ಅಮಾವಾಸ್ಯೆ
ಅಕ್ಟೋಬರ್ 2 : ಶುಕ್ರವಾರ, ಗಾಂಧಿ ಜಯಂತಿ
ಅಕ್ಟೋಬರ್ 26 : ಸೋಮವಾರ, ವಿಜಯದಶಮಿ
ಅಕ್ಟೋಬರ್ 30 : ಶುಕ್ರವಾರ, ಈದ್ ಮಿಲಾದ್
ಅಕ್ಟೋಬರ್ 31 : ಶನಿವಾರ, ಮಹರ್ಷಿ ವಾಲ್ಮೀಕಿ ಜಯಂತಿ
ನವೆಂಬರ್ 16 : ಸೋಮವಾರ, ಬಲಿಪಾಡ್ಯಮಿ, ದೀಪಾವಳಿ
ಡಿಸೆಂಬರ್ 3 : ಗುರುವಾರ, ಕನಕ ದಾಸ ಜಯಂತಿ
ಡಿಸೆಂಬರ್ 25 : ಶುಕ್ರವಾರ, ಕ್ರಿಸ್ಮಸ್
ಈ ರಜಾ ಪಟ್ಟಿಯು ಭಾನುವಾರಗಳಂದು ಬರುವ ಗಣರಾಜ್ಯೋತ್ಸವ (ಜನವರಿ 26), ಬಸವ ಜಯಂತಿ / ಅಕ್ಷಯ ತೃತೀಯ (ಏಪ್ರಿಲ್ 26), ಮೊಹರಂ ಕಡೆ ದಿನ (ಆಗಸ್ಟ್ 30), ಮಹಾನವಮಿ/ಆಯುಧ ಪೂಜೆ (ಅಕ್ಟೋಬರ್ 25), ಕನ್ನಡ ರಾಜ್ಯೋತ್ಸವ (ನವೆಂಬರ್ 1) ಹಾಗೂ ಎರಡನೇ ಶನಿವಾರದಂದು ಬರುವ ನರಕ ಚತುರ್ದಶಿ (ನವೆಂಬರ್ 14) ಮತ್ತು ನಾಲ್ಕನೇ ಶನಿವಾರದಂದು ಬರುವ ವರಸಿದ್ಧಿ ವಿನಾಯಕ ವ್ರತ (ಆಗಸ್ಟ್ 22) ರಜಾ ದಿನಗಳನ್ನು ಒಳಗೊಂಡಿರುವುದಿಲ್ಲ.