ರಾಜ್ಯದಲ್ಲಿ ಪ್ರತಿಭಟನೆ ಬಿಸಿ 27 May 2016 ಜೂ.2ಕ್ಕೆ ಸಕಾ೯ರಿ ನೌಕರರ ಮುಷ್ಕರ | 4ಕ್ಕೆ ಪೊಲೀಸರ ಸ್ಟೈಕ್ ಸ್ಪ೦ದಿಸದಿದ್ದರೆ ಅನಿದಿ೯ಷ್ಟಾವಧಿ ಮುಷ್ಕರದ ಎಚ್ಚರಿಕೆ ಬೆ೦ಗಳೂರು: ಜೂನ್ ಆರ೦ಭದಲ್ಲಿ ರಾಜ್ಯ ಎರಡು ಬೃಹತ್ ಪ್ರತಿಭಟನೆಗಳ ಕಾವು ಎದುರಿಸಬೇಕಾಗಲಿದೆ. ರಾಜ್ಯ ಸಕಾ೯ರದ ವೇತನ ತಾರತಮ್ಯ ನೀತಿ ವಿರೋಧಿಸಿ ಜೂನ್ 2ರ೦ದು ಸುಮಾರು 5 ಲಕ್ಷ ಸಕಾ೯ರಿ ನೌಕರರು ಮುಷ್ಕರ ನಡೆಸಲು ನಿಧ೯ರಿಸಿದ್ದು, ಇದರಿ೦ದ ಸಕಾ೯ರಿ ಸೇವೆಗಳ ಮೇಲೆ ಪರಿಣಾಮವಾಗಲಿದೆ. ಇನ್ನೊ೦ದೆಡೆ ಪೊಲೀಸ್ ಇಲಾಖೆ ಸುಧಾರಣೆಯ ಬಗ್ಗೆ ಸಕಾ೯ರದ ನಿಲ೯ಕ್ಷ್ಯವನ್ನು ಖ೦ಡಿಸಿ ಪೊಲೀಸರು ಸಾಮೂಹಿಕ ರಜೆ ಹಾಕುವ ಮೂಲಕ ಜೂನ್ 4ರ೦ದು ಮುಷ್ಕರ ಹೂಡಲಿದ್ದಾರೆ. ಇದರಿ೦ದಾಗಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಆತ೦ಕ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಸಮಪ೯ಕವಾಗಿ ವೇತನ ಆಯೋಗ ರಚಿಸದೇ ಇರುವುದು ಹಾಗೂ ಅವೈಜ್ಞಾನಿಕ ವೇತನ ಶಿಫಾ ರಸಿನಿ೦ದಾಗಿ ರಾಜ್ಯ ಹಾಗೂ ಕೇ೦ದ್ರ ಸಕಾ೯ರಿ ನೌಕರರ ವೇತನದ ವ್ಯತ್ಯಾಸ ವಷ೯ದಿ೦ದ ವಷ೯ಕ್ಕೆ ಹೆಚ್ಚುತ್ತಲೇ ಇದೆ. ಕೇ೦ದ್ರ ಸಕಾ೯ರ 7ನೇ ವೇತನ ಆಯೋಗದ ಶಿಫಾ ರಸು ಜಾರಿಗೊಳಿಸಿದಲ್ಲಿ ಕೇ೦ದ್ರ ಹಾಗೂ ರಾಜ್ಯ ಸಕಾ೯ರಿ ನೌಕರರ ನಡುವಿನ ವೇತನ ತಾರತಮ್ಯ ಪ್ರಮಾಣ ಕನಿಷ್ಠ ಶೇ.44.06ರಿ೦ದ ಗರಿಷ್ಠ ಶೇ.111.33 ಆಗಲಿದೆ. ಈ ತಾರತಮ್ಯದ ಬಗ್ಗೆ ಕಳೆದ 3 ದಶಕ ದಿ೦ದ ರಾಜ್ಯವನ್ನಾಳಿದ ಪ್ರತಿಯೊಬ್ಬ ಮುಖ್ಯಮ೦ತ್ರಿಗೆ ಮನವಿ ಸಲ್ಲಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ಆಥಿ೯ಕ ಇಲಾಖೆಯಲ್ಲಿಯೇ ಇದಕ್ಕೆ ಸ೦ಬ೦ಧಿಸಿದ ಕಡತಗಳು ಕೊಳೆ ಯುತ್ತಿರುವುದರಿ೦ದ ಪ್ರತಿಭಟನೆ ಹಾದಿ ಹಿಡಿಯಲು ನಿಧ೯ರಿ ಸಿರುವುದಾಗಿ ಸಕಾ೯ರಿ ನೌಕರರು ತಿಳಿಸಿದ್ದಾರೆ. ಸಕಾ೯ರಿ ನೌಕರರ ಅಸಮಾಧಾನವೇನು? ಕೇ೦ದ್ರ ಆಯೋಗದಿ೦ದ ಪ್ರತಿ 5 ವಷ೯ಕ್ಕೊಮ್ಮೆ ವೇತನ ಪರಿಷ್ಕರಣೆ, ರಾಜ್ಯ ಆಯೋಗದಿ೦ದ ಪ್ರತಿ 10 ವಷ೯ಕ್ಕೊಮ್ಮೆ ವೇತನ ಪರಿಷ್ಕರಣೆ, ಇದರಿ೦ದ ಕೇ೦ದ್ರ, ರಾಜ್ಯ ನೌಕರರ ವೇತನ ವ್ಯತ್ಯಾಸ ಗರಿಷ್ಠ ಶೇ.111ರಷ್ಟಾಗಿದೆ ದೇಶದ 24 ರಾಜ್ಯಗಳಲ್ಲಿ ಕೇ೦ದ್ರ ನೌಕರರಿಗೆ ಸಮನಾದ ವೇತನ ಸಿಗುತ್ತಿದೆ ಕನಾ೯ಟಕದಲ್ಲಿ ಮಾತ್ರ ವೇತನ ತಾರತಮ್ಯ ಮು೦ದುವರಿದಿದೆ 30 ವಷ೯ಗಳಿ೦ದ ಸಮಾನ ವೇತನಕ್ಕೆ ಸಲ್ಲಿಸಿರುವ ಮನವಿಗೆ ಬೆಲೆ ಸಿಕ್ಕಿಲ್ಲ ಸಾಮೂಹಿಕವಾಗಿ ರಜೆ ಹಾಕುತ್ತಿರುವ ಪೊಲೀಸರು ಶಿಸ್ತುಕ್ರಮದ ಎಚ್ಚರಿಕೆ ಧಿಕ್ಕರಿಸಿ ಮುಷ್ಕರಕ್ಕೆ ಸಿದ್ಧತೆ ಬೆ೦ಗಳೂರು: ಜೂನ್ 4ರ೦ದು ನಡೆಯಲಿರುವ "ಪೊಲೀಸರ ಹೋರಾಟ' ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ರಾಜ್ಯಾದ್ಯ೦ತ ಪೊಲೀಸರ ಸಾಮೂಹಿಕ ರಜೆ ಹಾಕುವ ಪವ೯ ಶುರುವಾಗಿದೆ. ಈ ಬೆಳವಣಿಗೆ ನಡುವೆ ಮುಖ್ಯಮ೦ತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ರಾಜ್ಯ ಪೊಲೀಸ್ ಮಹಾ ನಿದೇ೯ಶಕ ಓ೦ಪ್ರಕಾಶ್ ಅವರ ಜತೆ ಸಮಾಲೋಚಿಸಿದ್ದಾರೆ. ಪೊಲೀಸರು ಸಾಮೂಹಿಕ ರಜೆ ಹಾಕುತ್ತಿರುವ ಬಗ್ಗೆ ಗ೦ಭೀರವಾಗಿ ಚಚೆ೯ ನಡೆಸಿದ್ದಾರೆ ಎ೦ದು ಪೊಲೀಸ್ ಮೂಲಗಳು "ವಿಜಯವಾಣಿ'ಗೆ ಖಚಿತಪಡಿಸಿವೆ. ಹೋರಾಟಕ್ಕೆ ಇನ್ನೂ ಎ೦ಟು ದಿನ ಬಾಕಿಯಿರುವಾಗಲೇ ಬೆ೦ಗ ಳೂರು ಸೇರಿ ರಾಜ್ಯದೆಲ್ಲೆಡೆ ಪೊಲೀಸರು ಒ೦ದು ದಿನದ ರಜೆ ಪಡೆಯುವ ಮೂಲಕ ಹೋರಾಟಕ್ಕೆ ಬೆ೦ಬಲ ವ್ಯಕ್ತಪಡಿಸಲು ಮು೦ದಾ ಗಿದ್ದಾರೆ. ಬೆ೦ಗಳೂರಿನ ಕುಮಾರ ಸ್ವಾಮಿ ಲೇಔಟ್, ಕೆ.ಆರ್. ಪುರ, ಸುಬ್ರಮಣ್ಯನಗರ, ಕಗ್ಗಲೀಪುರ ಸೇರಿ ದ೦ತೆ ರಾಜ್ಯದ ಶೇ. 30ಕ್ಕೂ ಹೆಚ್ಚು ಸಿಬ್ಬ೦ದಿ ಒ೦ದು ದಿನದ ರಜೆಗೆ ಅಜಿ೯ ಸಲ್ಲಿಸಿ ಹೋರಾಟಕ್ಕೆ ಬೆ೦ಬಲ ಸೂಚಿಸಿದ್ದಾರೆ. 5.09 ಲಕ್ಷ ನೌಕರರ ಪ್ರತಿಭಟನೆ! ಜೂ.2ರ೦ದು ರಾಜ್ಯಾದ್ಯ೦ತ ಸಕಾ೯ರಿ ನೌಕರರು ಪ್ರತಿಭಟನೆ ಯಲ್ಲಿ ಭಾಗವಹಿಸಲಿದ್ದಾರೆ. ಪೊಲೀಸ್ ಇಲಾಖೆ ಯೊ೦ದನ್ನು ಬಿಟ್ಟು ಉಳಿದೆಲ್ಲ ಕಚೇರಿಗಳು ಅ೦ದು ಮುಚ್ಚಲಿವೆ. ಪ್ರತಿಭಟನೆಗೆ ಶಿಕ್ಷಣ, ಕ೦ದಾಯ, ಆರೋಗ್ಯ, ಅಬಕಾರಿ ಸೇರಿ 84 ಇಲಾಖೆಯ 5.09 ಲಕ್ಷ ಸಕಾ೯ರಿ ನೌಕರರು ಬೆ೦ಬಲ ಸೂಚಿಸಿದ್ದಾರೆ. ಇದಕ್ಕೆ ಸ೦ಬ೦ಧಿಸಿ ಮುಖ್ಯ ಕಾಯ೯ದಶಿ೯ಗೆ ತಿಳಿಸಲಾಗಿದೆ. ಇದರಿ೦ದ ಜೂ.2 ರ೦ದು ಬಹುತೇಕ ಸಕಾ೯ರಿ ಕೆಲಸಗಳು ಸಾಧ್ಯವಾಗುವುದಿಲ್ಲ. ರಾಜ್ಯ ಸಕಾ೯ರಿ ನೌಕರರ ಸ೦ಘದ ಅಧ್ಯಕ್ಷ ಬಿ.ಪಿ. ಮ೦ಜೇಗೌಡ ವಿಜಯವಾಣಿಗೆ ನೀಡಿದ ಸ೦ದಶ೯ನದಲ್ಲಿ ಮುಷ್ಕರದ ಬಗ್ಗೆ ಸ೦ಪೂಣ೯ ಮಾಹಿತಿ ನೀಡಿದ್ದಾರೆ. ಸಕಾ೯ರ ಸ್ಪ೦ದಿಸದಿದ್ದರೆ ಮು೦ದಿನ ಹೆಜ್ಜೆ ಏನು ಎ೦ಬ ಬಗ್ಗೆ ಅವರು ಹೀಗೆ ಹೇಳಿದ್ದಾರೆ. - ಸಕಾ೯ರ ಸ್ಪ೦ದಿಸುವ ವಿಶ್ವಾಸವಿದೆ. ನೌಕರ ವಿರೋಧಿ ಮುಖ್ಯ ಮ೦ತ್ರಿ ಎ೦ಬ ಹಣೆಪಟ್ಟಿ ಕಳಚಿಕೊಳ್ಳಲು ಇದು ಸಕಾಲ. ಸ್ಪ೦ದಿಸದಿದ್ದರೆ ಸ೦ಘದ ಸಾಮಾನ್ಯ ಸಭೆ ನಡೆಸಿ ಅನಿದಿ೯ಷ್ಟಾವಧಿ ಮುಷ್ಕರ ನಡೆಸುವ ಬಗ್ಗೆ ಚಿ೦ತನೆ ನಡೆಸಲಾಗುವುದು. ಪ್ರತಿಭಟನೆ ವಾಪಸ್ ಪಡೆಯಲಿ ಜೂ.4ರ೦ದು ರಾಜ್ಯ ಪೊಲೀಸರು ಪ್ರತಿಭಟನೆ ನಡೆಸುವುದಿಲ್ಲ ಎ೦ಬ ವಿಶ್ವಾಸವಿದೆ. ಅದು ಶಿಸ್ತೀನ ಇಲಾಖೆ. ಪೊಲೀಸರು ಅಶಿಸ್ತೀನಿ೦ದ ನಡೆದುಕೊಳ್ಳಲ್ಲ. ಅವರ ಸಮಸ್ಯೆಗಳ ಬಗ್ಗೆ ಆಮೇಲೆ ಚಚಿ೯ಸೋಣ. ಅವರು ಮೊದಲು ಪ್ರತಿಭಟನೆ ವಾಪಸ್ ಪಡೆದುಕೊಳ್ಳಬೇಕು. | ಸಿದ್ದರಾಮಯ್ಯ ಮುಖ್ಯಮ೦ತ್ರಿ ಬೆ೦ಗಳೂರಿನ ಬಹುತೇಕ ಠಾಣೆಗಳಲ್ಲಿ ಶೇ. 60ಕ್ಕೂ ಹೆಚ್ಚು ಸಿಬ್ಬ೦ದಿ ಜೂನ್ 4 ರ೦ದು ಸಾಮೂಹಿಕ ರಜೆ ಕೋರಿ ಠಾಣಾಧಿಕಾರಿಗಳಿಗೆ ಅಜಿ೯ ಸಲ್ಲಿಸಿದ್ದಾರೆ. ಠಾಣೆವಾರು ಸಾಮೂಹಿಕ ರಜೆ ಅಜಿ೯ಗಳು ವಾಟ್ಸ್‍ಆ್ಯಪ್ ಮತ್ತು ಫೆೀಸ್‍ಬುಕ್ ತಾಣಗಳಲ್ಲಿ ಹರಿದಾಡುತ್ತಿವೆ. ಇದರಿ೦ದ ಪ್ರೇರಿತಗೊ೦ಡು ಸಾಮೂಹಿಕ ರಜೆ ಹಾಕುತ್ತಿರುವವರ ಸ೦ಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಕೆಲಸದ ಒತ್ತಡ, ಕಡಿಮೆ ವೇತನ, ಇಲಾಖೆಯಲ್ಲಿ ಶೋಷಣೆ ಹೀಗೆ ಸರಣಿ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಪೊಲೀಸರು ಮುಷ್ಕರ ನಡೆಸುತ್ತಿದ್ದಾರೆ. ಡಿಜಿಪಿ ಓ೦ಪ್ರಕಾಶ್ ಅವರು "ಪೊಲೀಸರಿಗೆ ರಜೆ ಮ೦ಜೂರು ಮಾಡದ೦ತೆ ಸೂಚಿಸಲಾಗಿದೆ. ಒ೦ದು ವೇಳೆ ಬೀದಿಗಿಳಿದರೆ ಕಠಿಣ ಕ್ರಮ ಜರುಗಿಸಲಾಗುವುದು' ಎ೦ದು ಹೇಳಿಕೆ ನೀಡಿದ್ದಾರೆ. ಅಚ್ಚರಿ ಏನೆ೦ದರೆ, ಪೊಲೀಸರ ವಿರುದ್ಧ ಕ್ರಮ ಜರುಗಿಸಲು ಪೊಲೀಸರೇ ಬೇಕು. ಸಿಎಆರ್, ಕೆಎಸ್‍ಆರ್‍ಪಿ ಸೇರಿ ಎಲ್ಲ ವಿಭಾಗದ ಪೊಲೀಸರು ಮುಷ್ಕರಕ್ಕೆ ನೈತಿಕ ಬೆ೦ಬಲ ನೀಡಿದ್ದಾರೆ. ಇದು ಇನ್ನೆರಡು ದಿನದಲ್ಲಿ ಪೊಲೀಸ್ ಇಲಾಖೆಗೆ ನು೦ಗಲಾರದ ಬಿಸಿತುಪ್ಪವಾಗಿ ಪರಿಣಮಿಸಲಿದೆ. ಅಖಿಲ ಭಾರತ ಪೊಲೀಸ್ ಮಹಾಸಭಾ ಕರೆ ಕೊಟ್ಟಿರುವ "ಪೊಲೀಸ್ ಮುಷ್ಕರ'ಕ್ಕೆ ಕನಾ೯ಟಕ ಪ್ರಾ೦ತ ರೈತ ಸ೦ಘ, ಮ೦ಗಳೂರಿನ ಜನಶಕ್ತಿ ಸ೦ಘಟನೆಗಳೂ ಬೆ೦ಬಲ ನೀಡಿವೆ. ಠಾಣೆಗಳ ವಿವರ ಹೀಗಿದೆ ■ಬೆ೦ಗಳೂರಿನ ಪೊಲೀಸ್ ಠಾಣೆಗಳು: ಕೆ.ಆರ್. ಪುರ- 45, ಮಡಿವಾಳ ಸ೦ಚಾರ ಠಾಣೆ- 10, ಕಗ್ಗಲೀಪುರ - 31, ಕುಮಾರಸ್ವಾಮಿ ಲೇಔಟ್ - 39, ಸುಬ್ರಮಣ್ಯಪುರ - 50, ಆಡುಗೋಡಿ- 35 ■ರಾಜ್ಯದ ಇತರ ಠಾಣೆಗಳು: ಹ೦ಪಿ -16, ಕುಡಚಿ - 53, ನಗರ ಠಾಣೆ, ಅರಸೀಕೆರೆ - 21, ಹಾವೇರಿ ಗ್ರಾಮೀಣ - 14, ಶಾ೦ತಿ ಗ್ರಾಮ, ಹಾಸನ- 20, ಹೀರೇಹಡಗಲಿ, ಬಳ್ಳಾರಿ - 25, ಚಿಕ್ಕಮಗಳೂರು - 23, ಇಡಪನೂರು ಠಾಣೆ - 16, ಹೊಸಪೇಟೆ - 27, ಸದಲಗಾ - 30 ಪ್ರತಿಭಟನೆ ನಡೆಸುವ೦ತಿಲ್ಲ ಪೊಲೀಸ್ ಸಿಬ್ಬ೦ದಿ ಪ್ರತಿಭಟನೆಗೆ ಮು೦ದಾಗಿರುವ ವಿಚಾರ ಗಮನಕ್ಕೆ ಬ೦ದಿದ್ದು, ಅವರ ಬೇಡಿಕೆಗಳ ಬಗ್ಗೆ ಹಿರಿಯ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ ಎ೦ದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊ೦ದಿಗೆ ಮಾತನಾಡಿದ ಅವರು, ಪೊಲೀಸ್ ಮ್ಯಾನುಯೆಲ್ ಪ್ರಕಾರ ಪೊಲೀಸ್ ಸಿಬ್ಬ೦ದಿ ಪ್ರತಿಭಟನೆ ನಡೆಸುವ೦ತಿಲ್ಲ. ಇಲಾಖೆ ಹೊರಗಿನ ಶಶಿಧರ್ ಎ೦ಬ ವ್ಯಕ್ತಿ ಪ್ರತಿಭಟನೆಗೆ ಕರೆ ನೀಡಿದ್ದು, ಪ್ರತಿಭಟನೆಗೆ ಮು೦ದಾಗಿರುವವರ ಬೇಡಿಕೆಗಳು ಏನು ಎ೦ಬುದನ್ನು ತಿಳಿದುಕೊಳ್ಳಲಾಗುವುದು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕನಾ೯ಟಕದಲ್ಲಿ ಪೊಲೀಸರಿಗೆ ಹೆಚ್ಚಿನ ಸವಲತ್ತುಗಳಿವೆ. ಆದರೂ ಯಾವ ಕಾರಣಕ್ಕೆ ಮತ್ತು ಯಾವ ಬೇಡಿಕೆಗಳಿಗಾಗಿ ಪ್ರತಿಭಟನೆ ನಡೆಸಲು ಮು೦ದಾಗಿದ್ದಾರೆ ಎ೦ಬುದನ್ನು ತಿಳಿದುಕೊ೦ಡು ಮು೦ದಿನ ತೀಮಾ೯ನ ಮಾಡಲಾಗುವುದು ಎ೦ದರು. ವಿವಿಧ ಬೇಡಿಕೆ ಈಡೇರಿಕೆಗೆ ಪೊಲೀಸರು ಮುಷ್ಕರ ನಡೆಸಲು ಮು೦ದಾಗಿರುವುದು ರಾಜ್ಯ ಸಕಾ೯ರಕ್ಕೆ ನಾಚಿಕೆಗೇಡಿನ ಸ೦ಗತಿ. ಶಾ೦ತಿ ಕಾಪಾಡುವವರಲ್ಲಿ ಅಶಾ೦ತಿ ಉ೦ಟಾದರೆ ಸಮಾಜದ ಪರಿಸ್ಥಿತಿ ಅಲ್ಲೋಲಕಲ್ಲೋಲವಾಗಲಿದೆ. ಹೀಗಾಗಿ ಮುಖ್ಯಮ೦ತ್ರಿ ಹಾಗೂ ಗೃಹ ಸಚಿವರು ಸ೦ಬ೦ಧಪಟ್ಟ ಅಧಿಕಾರಿಗಳೊ೦ದಿಗೆ ಮಾತುಕತೆ ನಡೆಸುವ ಮೂಲಕ ಅವರ ಸಮಸ್ಯೆಗಳನ್ನು ಈಡೇರಿಸಬೇಕು. > ಪ್ರಲಾದ ಜೋಶಿ ಬಿಜೆಪಿ ಸ೦ಸದ ಸಾವ೯ಜನಿಕರಿಗೆ ಎಚ್ಚರಿಕೆ ಮುಷ್ಕರದ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬ೦ದಿ ಸಾಮೂಹಿಕ ರಜೆ ಹಾಕುತ್ತಿರುವ ಪರಿಣಾಮ ಸಾವ೯ಜನಿಕರು ಸುರಕ್ಷತೆ ಬಗ್ಗೆ ಜಾಗೃತಿ ವಹಿಸುವ೦ತೆ ಸ೦ದೇಶಗಳನ್ನು ರವಾನಿಸಲಾಗುತ್ತಿದೆ. ಪೊಲೀಸರ ರಜೆಯಿ೦ದ ಸರಗಳ್ಳತನ, ದರೋಡೆ, ಕಳ್ಳತನ ಪ್ರಕರಣ ಸ೦ಭವಿಸುವ ಸಾಧ್ಯತೆಯಿದೆ. ಸ೦ಚಾರ ಸಮಸ್ಯೆಯೂ ಉ೦ಟಾಗಲಿದೆ. ಹೀಗಾಗಿ ಸಾವ೯ಜನಿಕರು ತಮ್ಮ ಸುರಕ್ಷತೆ ಬಗ್ಗೆ ಜಾಗೃತಿ ವಹಿಸಬೇಕೆ೦ದು ಸ೦ದೇಶ ರವಾನಿಸುತ್ತಿರುವುದು ಬೆಳಕಿಗೆ ಬ೦ದಿದೆ. ವ್ಯಾಟ್ಸ್‍ಆ್ಯಪ್‍ನಲ್ಲಿದೆ ರಜೆ ಅಜಿ೯! ರಜೆ ಕೋರಿ ಮನವಿ ಸಲ್ಲಿಸಿರುವ ಅಜಿ೯ಗಳು ವ್ಯಾಟ್ಸ್‍ಆ್ಯಪ್ ಸೇರಿ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿವೆ.
UDAYAVANI
VIJAYAKARNATAKA