2 ಲಕ್ಷದ 40 ಸಾವಿರ ಭೇಟಿ, ದಿನವೊಂದಕ್ಕೆ 18000 ಜನ ಭೇಟಿ ನೀಡಿದ ಧಾಖಲೆ!
ಕೆಲವು ತಿಂಗಳಿಂದ ಬಿಡುವಿಲ್ಲದ್ದರಿಂದ ಈ ಬ್ಲೊಗ್ ಕಡೆ ಗಮನಕೊಡಲಾಗಲ್ಲಿಲ್ಲ. ತಮ್ಮ ಅಭಿಮಾನಕ್ಕಾಗಿ ಅಭಾರಿ.
ಈದೇ ತರಹದ ಬೇರೆ ಬ್ಲೊಗ್ ಗಳು ಆರಂಭವಾಗಿವೆ, ಸಂತೊಷ, ಸರ್ಕಾರಿ ನೌಕರರಿಗೆ ಮಾಹಿತಿ ನೀಡುವ ಬ್ಲೊಗ್ ಕೊರತೆ ನೀಗಿದೆ. ನಾನು ವಿಶ್ರಾಂತಿ ಪಡೆಯಬಹುದು.
ಇಲಾಖೆಯಲ್ಲಿ ಪದೊನ್ನತಿ ಕೊಡಬಹುದಾದರೂ ಕೊಡದ ಸಿಬ್ಬಂದಿ, ಬೆನ್ನ ಹಿಂದೆ ಕೇಡು ಬಯಸುವ ಪರಿಚಿತರು, ಹೆಸರು ಕೆಡಿಸುವ ಪ್ರಯತ್ನಗಳು.....
ಛೆ ಈ ನೌಕರಿಯೆ ಬೇಸರ ತರಿಸುತ್ತಿದೆ!
ಸ್ವಯಂ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದೆನೆ.
ನೇರ ನಡೆನುಡಿಯ ನಿಷ್ಟಾವಂತ ಪಾರದರ್ಶಕ ನೌಕರರು ಈ ವ್ಯವಸ್ಥೆಗೆ ಬೇಡ. ಚಮಚಾಗಿರಿ, ರಾಜಕೀಯ ಮಾಡುವುದು ನಮ್ಮ ಮನಸ್ಸಿಗೆ ಸರಿಬಾರದು.
ಬ್ಲೊಗನ್ನು ಅಳಿಸುವುದು 1ಕ್ಷಣದ ಕೆಲಸ. ಆದರೆ ಮುಂದೆ ಉಪಯೋಗವಾದರೆ ಆಗಲಿ, ನಿಮ್ಮ ಆಶೀರ್ವಾದವು ನನಗಿರಲಿ ಎಂದು ತಮ್ಮೆಲ್ಲರ ಗಮನಕ್ಕೆ ತಂದು, ಇನ್ನು ಮುಂದೆ ಯಾವುದೇ ಪೊಸ್ಟ್ ಮಾಡಲು ಮನಸ್ಸಿಗೆ ಸಾಧ್ಯವಾಗದಿರುವದಕ್ಕೆ ವಿಷಾದಿಸುತ್ತೇನೆ.
ನಿಮ್ಮ
ವಿಜಯ್ ಎಂ. ಕೆ