#ಶಿಕ್ಷಕರ #ವರ್ಗಾವಣೆ #ತಿದ್ದುಪಡಿ #ನಿಯಮಾವಳಿಗಳು-೨೦೧೫:
* ಘಟಕದ ಒಳಗಿನ ವರ್ಗಾವಣೆ ೫%
* ಅಂತರ್-ಘಟಕ ವರ್ಗಾವಣೆ ೩%
* ಒಟ್ಟು ೩%+೫%=೮% ವರ್ಗಾವಣೆ!
* ಪರಸ್ಪರ ವರ್ಗಾವಣೆಗೆ ಒಂದು ಸಲ ಮಾತ್ರ ಅವಕಾಶ
* ಪರಸ್ಪರ ವರ್ಗಾವಣೆ ಪಡೆಯಲು ಇಬ್ಬರು ಶಿಕ್ಷಕರಿಗೂ ಕನಿಷ್ಠ ೩ ವರ್ಷದ ಸೇವಾವಧಿ ಪೂರೈಸಿರಬೇಕು ಮತ್ತು ಕನಿಷ್ಠ ೩ ವರ್ಷದ ಸೇವಾವಧಿ ಇರಬೇಕು
* ಅಂತರ್-ಘಟಕ ಎರಡು ಸಲ ಮಾತ್ರ ಅವಕಾಶ
-Kiran,Teacher, Mysore
#ವರ್ಗಾವಣಾ ನಿಯಮದ ವಿಶ್ಲೇಷಣೆ:
* ಘಟಕದ ಒಳಗಿನ ವರ್ಗಾವಣೆ ೫% ಈ ಮೊದಲೇ ಇತ್ತು, ಅದು ಮುಂದುವರೆದಿದೆ.
* ಅಂತರ್-ಘಟಕ ವರ್ಗಾವಣೆ ೧% ನಿಂದ ೩% ಗೆ ಏರಿಕೆಯಾಗಿದೆ
* ಪರಸ್ಪರ ವರ್ಗಾವಣೆ ಎಷ್ಟು ಸಲ ಬೇಕಾದರೂ ಪಡೆಯಬಹುದಿತ್ತು, ಆದರೆ ಈಗ ಪರಸ್ಪರ ವರ್ಗಾವಣೆಯನ್ನು ಒಂದು ಸಲ ಮಾತ್ರ ಪಡೆಯಲು ಅವಕಾಶ ಇದೆ
* ಪರಸ್ಪರ ವರ್ಗಾವಣೆ ಪಡೆಯಲು 'ಪ್ರೊಬೇಷನರಿ ಪೀರಿಯಡ್ ಡಿಕ್ಲೇರ್ಡ್' ಆಗಿರುವ ಮತ್ತು ೩ ವರ್ಷದ ಸೇವಾವಧಿ ಆಗಿದ್ದರೆ ಸಾಕಾಗಿತ್ತು,
ಮತ್ತು ನಿವೃತ್ತಿಗೆ ೨ ವರ್ಷ ಸೇವಾವಧಿ ಇದ್ದವರೂ ಕೂಡ ಪರಸ್ಪರ ವರ್ಗಾವಣೆಗೆ ಅರ್ಹರಿದ್ದರು,
ಆದರೆ ಈಗ ಕನಿಷ್ಠ ೩ ವರ್ಷದ ಸೇವಾವಧಿ ಅಥವಾ ೩ ವರ್ಷದ ಶಾಲಾ ಸೇವಾವಧಿ ಆಗಲೇ ಬೇಕು ಮತ್ತು ನಿವೃತ್ತಿಗೆ ಕನಿಷ್ಠ ೩ ವರ್ಷದೊಳಗಿರಬೇಕು.
#ಪೂರೈಸದ ಈ ಕೆಳಗಿನ ವರ್ಗಾವಣೆ ನಿಯಮದ ಬೇಡಿಕೆ:
* ಸಿ.ಇ.ಟಿ ಬ್ಯಾಚ್ ಪ್ರಾಥಮಿಕ ಶಿಕ್ಷಕರಿಗೆ 'ಘಟಕ=ತಾಲ್ಲೂಕು" ಮುಂದುವರೆದಿದೆ
* ಸಿ.ಇ.ಟಿ. ಬ್ಯಾಚ್ ಪ್ರೌಢಶಾಲಾ ಶಿಕ್ಷಕರಿಗೆ 'ಘಟಕ=ಜಿಲ್ಲೆ" ಮುಂದುವರೆದಿದೆ
* ಎಸ್.ಎಸ್.ಎ ಶಿಕ್ಷಕರು ಮತ್ತು ಟಿ.ಜಿ.ಟಿ ಶಿಕ್ಷಕರ ಬಗ್ಗೆ ಯಾವುದೇ ನಿಲುವು ಬದಲಾಗಿಲ್ಲ
* ಎಸ್.ಎಸ್.ಎ ಮತ್ತು ಟಿ.ಜಿ.ಟಿ ಶಿಕ್ಷಕರು 'ಸಾಮಾನ್ಯ ಶಿಕ್ಷಕರ ಜಾಗಕ್ಕೆ ವರ್ಗಾವಣೆ ಪಡೆಯುವಂತಿಲ್ಲ'
* ೨೦೦೫ಕ್ಕೆ ೫ ವರ್ಷ ಸೇವಾವಧಿ ಪೂರೈಸಿದ ಅವಿವಾಹಿತ ಶಿಕ್ಷಕರು ಮಾತ್ರ ವರ್ಗಾವಣೆಗೆ ಅರ್ಹರು ಎಂಬ ಅವೈಜ್ಞಾನಿಕ ನಿಯಮದಲ್ಲಿ ಬದಲಾವಣೆ ಇಲ್ಲ!