Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ
Friday, April 26, 2019
Thursday, April 25, 2019
Paperless dept
ಮೇ 1 ರಿಂದಲೇ ಜಾರಿ l ಕಾಗದ ರಹಿತವಾಗಲಿದೆ ಸಾರ್ವಜನಿಕ ಶಿಕ್ಷಣ ಇಲಾಖೆ
ಶಿಕ್ಷಣ ಇಲಾಖೆಯ ಎಲ್ಲ ಸೇವೆ ಆನ್ಲೈನ್ಗೆ
ಪ್ರಜಾವಾಣಿ ವಾರ್ತೆ
ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಸಂಪೂರ್ಣ ಡಿಜಿಟಲೀಕರಣ ಆಗುವತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಇದರಿಂದ ಇಲಾಖೆ ಕಾಗದ ಮುಕ್ತ
ವಾಗಲಿದ್ದು, ಪ್ರತಿಯೊಂದು ಸೇವೆಯೂ ಇನ್ನು ಮುಂದೆ ಆನ್ಲೈನ್ನಲ್ಲೇ ಲಭ್ಯವಾಗಲಿದೆ.
ವಾಗಲಿದ್ದು, ಪ್ರತಿಯೊಂದು ಸೇವೆಯೂ ಇನ್ನು ಮುಂದೆ ಆನ್ಲೈನ್ನಲ್ಲೇ ಲಭ್ಯವಾಗಲಿದೆ.
ಇಲಾಖೆಯ ಗ್ರೂಪ್ ‘ಎ’ ಮತ್ತು ‘ಬಿ‘ ದರ್ಜೆಯ ಅಧಿಕಾರಿಗಳು ಹಾಗೂ ಬೋಧಕ ಮತ್ತು ಬೋಧಕೇತರ ವೃಂದದ ನೌಕರರ ಸೇವಾ ಸೌಲಭ್ಯ
ಗಳನ್ನು ಆನ್ಲೈನ್ ಮೂಲಕವೇ ಒದಗಿಸುವ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಮೇ 1ರಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.
ಗಳನ್ನು ಆನ್ಲೈನ್ ಮೂಲಕವೇ ಒದಗಿಸುವ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಮೇ 1ರಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.
‘ಇಲಾಖೆ ದೊಡ್ಡದಾಗಿ ಬೆಳೆದಿದ್ದು, ಸಿಬ್ಬಂದಿ ಸಂಖ್ಯೆ ಹೆಚ್ಚಾಗಿರುವುದರಿಂದ ಹಾಲಿ ವ್ಯವಸ್ಥೆಯಲ್ಲಿ ಎಲ್ಲ ರೀತಿಯ ಸೇವೆಗಳನ್ನು ತ್ವರಿತಗತಿಯಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ. ವಿವಿಧ ಹಂತ
ಗಳಲ್ಲಿ ನಿಯಂತ್ರಣಾಧಿಕಾರಿಗಳ ಮೂಲಕ ಇಲಾಖಾ ಮುಖ್ಯಸ್ಥರಿಗೆ ಹಾಗೂ ಕೆಲವು ಸೌಲಭ್ಯಗಳನ್ನು ಪಡೆಯಲು ಸರ್ಕಾರಕ್ಕೆ ಮನವಿ ಸಲ್ಲಿಸಿ, ಅನುಮತಿ ಪಡೆಯಬೇಕಾಗಿದೆ. ಕಾರ್ಯಭಾರದ ಕಾರಣಗಳಿಂದ ಅನುಮತಿ ನೀಡು
ವುದು ವಿಳಂಬವಾಗುತ್ತಿದೆ. ಇದರಿಂದ ಅಧಿಕಾರಿಗಳಿಗೆ ಆಡಳಿತ ಮತ್ತು
ಕಚೇರಿ ಸಿಬ್ಬಂದಿ ವರ್ಗದವರಿಗೆ ದೈನಂದಿನ ಕಾರ್ಯಗಳ ಮೇಲೆ
ವ್ಯತಿರಿಕ್ತ ಪರಿಣಾಮ ಉಂಟಾಗು
ತ್ತದೆ’ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಎಲ್ಲ ಸೌಲಭ್ಯಗಳನ್ನೂ ಆನ್ಲೈನ್ ಮೂಲಕ ನೀಡಲು ಅಗತ್ಯವಿರುವ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಮಿತವ್ಯಯ ಸಾಧಿಸಲು ಅನುಕೂಲ
ವಾಗಲಿದೆ ಎಂದು ಮೂಲಗಳು ಹೇಳಿವೆ.
ವಾಗಲಿದೆ ಎಂದು ಮೂಲಗಳು ಹೇಳಿವೆ.
ಅಧಿಕಾರಿಗಳ ಪ್ರವಾಸ ದಿನಚರಿ ನಿರ್ವಹಣೆ: ಶಾಲೆಗಳು, ಶಿಕ್ಷಕರ ತರಬೇತಿ ಕೇಂದ್ರಗಳು ಮತ್ತು ಪ್ರಮುಖ ಕಾರ್ಯಕ್ರಮಗಳ ಮೇಲುಸ್ತುವಾರಿ
ಗಾಗಿ ಅಧಿಕಾರಿಗಳು ಪ್ರವಾಸ ಕೈಗೊಳ್ಳಬೇಕಾಗಿದೆ. ಪ್ರತಿ ತಿಂಗಳ 28ನೇ ತಾರೀಕಿನ ಒಳಗೆ ಪ್ರವಾಸ ಪಟ್ಟಿ ತಯಾರಿಸಿ ಅನುಮೋದನೆ ಪಡೆದುಕೊಳ್ಳಬೇಕು. ಅಲ್ಲದೆ, ಪ್ರವಾಸ ದಿನಚರಿಯನ್ನು ದಾಖಲೆಗಳೊಂದಿಗೆ ನಿಯಂತ್ರಣಾಧಿಕಾರಿಗಳಿಗೆ ಪ್ರತಿ ತಿಂಗಳ 5ನೇ ತಾರೀಕಿನ ಒಳಗೆ ನೀಡಬೇಕು. ಈ ಸಂಬಂಧ ಪ್ರಕ್ರಿಯೆ
ಗಳನ್ನು ಸರಳೀಕರಿಸಲು ಹಾಗೂ ತ್ವರಿತ
ಗೊಳಿಸಲು ಆನ್ಲೈನ್ ಮೂಲಕವೇ ವ್ಯವಹರಿಸಬೇಕು.

ಕೆಸಿಎಸ್ಆರ್ ನಿಯಮದಂತೆ 10 ವರ್ಷಗಳ ಕಾಲ ಮಿತಿ ವೇತನ ಬಡ್ತಿ, 15 ವರ್ಷ ಸ್ವಯಂಚಾಲಿತ ವೇತನ ಬಡ್ತಿ, 20, 25, 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಹಾಗೂ ಸ್ಥಗಿತ ವೇತನ ಬಡ್ತಿ, ಹೆಚ್ಚುವರಿ ವೇತನ ಬಡ್ತಿ, ವಿಶೇಷ ವೇತನ ಬಡ್ತಿ, ಅಂಗವಿಕಲ ಬಡ್ತಿ ವಿಚಾರ
ಗಳನ್ನು ಆನ್ಲೈನ್ ಮೂಲಕವೇ
ಇತ್ಯರ್ಥಪಡಿಸಲಾಗುವುದು.
ಗಳನ್ನು ಆನ್ಲೈನ್ ಮೂಲಕವೇ
ಇತ್ಯರ್ಥಪಡಿಸಲಾಗುವುದು.
ಆನ್ಲೈನ್ನಲ್ಲಿ ಯಾವ ಸೇವೆ ಲಭ್ಯ
ವಿವಿಧ ರಜಾ ಸೌಲಭ್ಯಗಳು, ಪಾಸ್ಪೋರ್ಟ್ ಪಡೆಯಲು ಮತ್ತು ವಿದೇಶ ಪ್ರವಾಸಕ್ಕೆ ನಿರಾಕ್ಷೇಪಣಾ ಪತ್ರ, ಶಿಸ್ತು ಪ್ರಕರಣಗಳು ಮತ್ತು ದೂರುಗಳ
ಸಲ್ಲಿಕೆ. ಪ್ರಭಾರ ಭತ್ಯೆ, ಅಧಿಕಾರಿಗಳ ಪ್ರವಾಸ ದಿನಚರಿ ನಿರ್ವಹಣೆ, ಅರ್ಹತಾದಾಯಕ ಸೇವೆ ಸೇರ್ಪಡೆಗೆ ಅನುಮೋದನೆ. ಕಾಲಮಿತಿ ವೇತನ
ಬಡ್ತಿ, ಸ್ವಯಂ ಚಾಲಿತ ವೇತನ ಬಡ್ತಿ, ಹೆಚ್ಚುವರಿ ಬಡ್ತಿ, ಸ್ಥಗಿತ ವೇತನ ಬಡ್ತಿ, ಚರಾಸ್ತಿ ಮತ್ತು ಸ್ಥಿರಾಸ್ತಿ ಖರೀದಿಗೆ ಅನುಮತಿ. ಉನ್ನತ ವ್ಯಾಸಂಗಕ್ಕೆ ಮಂಜೂರಾತಿ ಸೇರಿ ಎಲ್ಲ ಸೇವೆ ಮತ್ತು ವ್ಯವಹಾರಗಳನ್ನೂ ಆನ್ಲೈನ್ ಮೂಲಕವೇ ನಡೆಸಬೇಕು.

Wednesday, April 24, 2019
Tuesday, April 23, 2019
Saturday, April 20, 2019
Friday, April 19, 2019
Thursday, April 18, 2019
Wednesday, April 17, 2019
Tuesday, April 16, 2019
Saturday, April 13, 2019
Subscribe to:
Posts (Atom)
CLICK PHOT&JOIN: Karnataka government employee's News & Order's exchange Teligram GROUP
ಬಹಳ ಸದಸ್ಯರ ಒತ್ತಾಯದಮೇರೆಗೆ ಗುಂಪಿಗೆ ಮರುಚಾಲನೆ ನೀಡಲಾಗಿದೆ. ಕೆಟ್ಟ=ಟೀಕೆ,ಟಿಪ್ಪಣಿ,ಸ್ವಗತ ಇಲ್ಲಿ ನಿಷೇಧ, ಎಲ್ಲೋ ಕುಳಿತು ನಿಮ್ಮ ಬೆರಳು/ಯೋಚನೆ ಅಡ್ಮಿನ್ ನಿಯಂತ್ರಣ ಮಾಡಲು ಆಗಲ್ಲ, ಚರ್ಚಿಸುವ ಮುಂಚೆ ಯೋಚಿಸಿ ಪೋಸ್ಟ್ ಮಾಡಿ, ನೀವೂ ತೊಂದರೆಗೆ ಸಿಲುಕಬೇಡಿ, ಅಡ್ಮಿನಿಗೂ ತೊಂದರೆ ಕೊಡಬೇಡಿ. ಆರೋಗ್ಯಕರ ಚರ್ಚೆ, ಸಹಾಯ, ಸ್ನೇಹ ಗುಂಪಿನ ಗುರಿ. ಎಲ್ಲರೂ ಭಾಗವಹಿಸಲು ಪೋಸ್ಟ್ ಮಾಡುವ ಅವಕಾಶ ನೀಡಲಾಗಿದೆ. ನಿಯಮ ಮೀರುವ ಸದಸ್ಯರನ್ನು ಮುಲಾಜಿಲ್ಲದೇ ಹೊರಹಾಕಿ ಬ್ಲಾಕ್ ಮಾಡಲಾಗುವುದು ಇದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸುದ್ದಿ ಆದೇಶ ವಿನಿಮಯ ಟೆಲಿಗ್ರಾಂ ಗುಂಪಿನ ಆಹ್ವಾನ ಕೊಂಡಿ. ಮೇಲಿನ ಫೋಟೋ ಬೆರಳಿಂದ ತಟ್ಟುವ ಮುಖಾಂತರ ಗುಂಪಿಗೆ ನೀವೇ ಸೇರ್ಪಡೆ ಆಗಬಹುದು. ತಟ್ಟುವ ಮುಂಚೆ ಟೆಲಿಗ್ರಾಂ ಆಪ್ ಹಾಕಿಕೊಂಡು ತಟ್ಟಿ.