Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ

Tuesday, March 20, 2018

Only 1 month time to implement & solve promotion issue.

WITH IN A WEEK = BEFORE 27TH OF THIS MONTH ALL DEMOTION PROMOTION LISTS MUST BE PUBLISHED, READ ITS CLEAR IN UDAYAVANI CLIPPING

ಒಂದು ವಾರದ ಒಳಗೆ ಮಾರ್ಚ್ ೨೭ರ ಒಳಗೆ ಹಿಂಬಡ್ತಿ ಮುಂಬಡ್ತಿ ಪಟ್ಟಿ ಪ್ರಕಟಿಸಬೇಕು . ಉದಯವಾಣಿ ಕ್ಲಿಪ್ಪಿಂಗ್ ನಲ್ಲಿ ಸ್ಪಷ್ಟವಾಗಿ ಇದೆ ಓದಿ 






Wednesday, March 14, 2018

March 20th Supreme court hearing, Present promotions status,


ಬಡ್ತಿ ಮೀಸಲು: ಇಕ್ಕಟ್ಟಿನಲ್ಲಿ ಸರ್ಕಾರ

ಪ್ರಜಾವಾಣಿ ವಾರ್ತೆ
ಬೆಂಗಳೂರು: ರಾಜ್ಯ ಸರ್ಕಾರದ ‘ಬಡ್ತಿ ಮೀಸಲು ಕಾಯ್ದೆ–2002’ ಅನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್ 2017ರ ಫೆ. 9ರಂದು ನೀಡಿರುವ ಆದೇಶ ಪಾಲಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
1978ರ ಏ. 24ರಿಂದ ಅನ್ವಯವಾಗುವಂತೆ ಸರ್ಕಾರಿ ನೌಕರರ ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿ, ತತ್ಪರಿಣಾಮ ಕ್ರಮ (ಮುಂಬಡ್ತಿ) ತೆಗೆದುಕೊಳ್ಳುವಂತೆ ಕೋರ್ಟ್‌ ಆದೇಶಿಸಿತ್ತು. ಈ ತೀರ್ಪು ಮರುಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಿ ಎರಡು ಬಾರಿ ಕಾಲಾವಕಾಶ ಪಡೆದುಕೊಂಡಿದ್ದ ಸರ್ಕಾರ, ಇದೇ 15ರೊಳಗೆ ಆದೇಶ ಪಾಲಿಸಲೇ ಬೇಕಾದ ಅನಿವಾರ್ಯತೆಯಲ್ಲಿ ಸಿಕ್ಕಿಕೊಂಡಿದೆ.
ಬೀಸುವ ದೊಣ್ಣೆಯಿಂದ ತಪ್ಪಿಸಿಕೊ
ಳ್ಳಲು ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಅನ್ವಯ ಸಾಮಾನ್ಯ ಬಡ್ತಿ ನೀಡುವ ಬದಲು, ಸೇವಾ ನಿಯಮಾವಳಿಯ ‘ನಿಯಮ 32’ರ ಅಡಿ ಬಡ್ತಿ ನೀಡಿ ಆದೇಶ ಪಾಲನೆಗೆ ಮುಂದಾಗಿರುವ ಬಗ್ಗೆ ‘ಸುಪ್ರೀಂ’ ಪ್ರಮಾಣ ಪತ್ರ ಸಲ್ಲಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ತೀರ್ಮಾನಿಸಿತ್ತು. ಆದರೆ, ಗೊಂದಲ ಮುಂದುವರಿದಿರುವುದರಿಂದ ಈ ಪ್ರಕ್ರಿಯೆಯನ್ನೂ ಮಂಗಳವಾರ ರದ್ದುಪಡಿಸಲಾಗಿದೆ.
ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರದಲ್ಲಿರುವುದರಿಂದ ಸುಪ್ರೀಂ ಕೋರ್ಟ್‌ ಆದೇಶ ಪಾಲನೆಯ ನಿಟ್ಟಿನಲ್ಲಿ ಏನು ಮಾಡಬೇಕೆಂಬ ಗೊಂದಲ ಮುಂದುವರಿದಿದೆ. ಹೀಗಾಗಿ, ಯಾವ ಕ್ರಮ ತೆಗೆದುಕೊಳ್ಳಬೇಕು ಎಂದು ಅಡ್ವೊಕೇಟ್‌ ಜನರಲ್‌ ಮಧುಸೂದನ್‌ ನಾಯಕ್‌ ಅವರಿಂದ ಡಿಪಿಎಆರ್‌ ಅಭಿಪ್ರಾಯ ಕೇಳಿದೆ. ಮುಖ್ಯಮಂತ್ರಿ ಜೊತೆ ಚರ್ಚಿಸಿದ ಬಳಿಕ ಅಂತಿಮವಾಗಿ ತೀರ್ಮಾನಕ್ಕೆ ಬರಲಾಗುವುದು ಎಂದು ಡಿಪಿಎಆರ್‌ ಮೂಲಗಳು ತಿಳಿಸಿವೆ.
ತೀರ್ಪು ಬಂದು 11 ತಿಂಗಳು ಕಳೆ
ದರೂ ಆದೇಶ ಪಾಲಿಸಿದ ಸರ್ಕಾರದ ವಿರುದ್ಧ ಸಲ್ಲಿಕೆಯಾದ ನ್ಯಾಯಾಂಗ ನಿಂದನೆ ಅರ್ಜಿ ಇದೇ 16ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಬ
ಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಅಂದು ವಿಚಾರಣೆಗೆ ನಮೂದಾದ ಪ್ರಕರ
ಣಗಳ ಪಟ್ಟಿಯಲ್ಲಿ ಇಲ್ಲದಿರುವುದ
ರಿಂದ 20ರಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ನಿಯಮ 32ರ ಅಡಿ ಬಡ್ತಿ ನೀಡುವಂತೆ ಎಲ್ಲ ಇಲಾಖೆಗಳಿಗೆ ಡಿಪಿಎಆರ್‌ ಕಳೆದ ವಾರ ಸುತ್ತೋಲೆ ಹೊರಡಿಸಿದೆ. ಅದಕ್ಕೆ ಪೂರಕವಾಗಿ ಸಚಿವಾಲಯದ ಕೆಲವು ಹುದ್ದೆಗಳಲ್ಲಿ ಬಡ್ತಿ ನೀಡಲು ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ಅರ್ಹರ ಪಟ್ಟಿ ಸಿದ್ಧಪಡಿಸಿದ್ದ ಕೆಲವು ಇಲಾಖೆಗಳು, ಡಿಪಿಸಿ ಸಭೆಗೆ ದಿನವನ್ನೂ ನಿಗದಿಪಡಿಸಿತ್ತು.
ಕಾಯ್ದೆ ರದ್ದುಪಡಿಸಿದ ಕಾರಣಕ್ಕೆ, 2017 ಮಾರ್ಚ್‌ 22ರಿಂದ ಸಾಮಾನ್ಯ ಬಡ್ತಿಯನ್ನು ಸರ್ಕಾರ ಸ್ಥಗಿತಗೊಳಿಸಿದೆ. ಆದರೆ, ಕೆಲವು ಇಲಾಖೆಗಳಲ್ಲಿ ನಿಯಮ 32ರ ಅಡಿ ಬಡ್ತಿ ನೀಡುವ ಪ್ರಕ್ರಿಯೆ ಮುಂದುವರಿದಿತ್ತು. ಅದಕ್ಕೆ ಆಕ್ಷೇಪ ಬಂದಾಗ ಆ ಪ್ರಕ್ರಿಯೆಯನ್ನೂ ಡಿಸೆಂಬರ್‌ನಿಂದ ಸ್ಥಗಿತಗೊಳಿಸಲಾಗಿತ್ತು.
ಯಥಾಸ್ಥಿತಿ ಅರ್ಜಿ ವರ್ಗಾವಣೆ: ಜ್ಯೇಷ್ಠತಾ ಪಟ್ಟಿ ಪರಿಷ್ಕರಿಸಿ ಬಡ್ತಿ ನೀಡುವ ವಿಷಯದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಬೇಕು ಎಂದು ಅರಣ್ಯ ಮತ್ತು ಲೋಕೋಪಯೋಗಿ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಹಿಂದೆ ಕೆಪಿಟಿಸಿಎಲ್‌ ಮತ್ತು ನಗರ ಯೋಜನಾ ಇಲಾಖೆಯ ಅಧಿಕಾರಿಗಳು ಪ್ರತ್ಯೇಕವಾಗಿ ಸಲ್ಲಿಸಿದ ಅರ್ಜಿಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ನ್ಯಾಯ
ಮೂರ್ತಿ ಮದನ್‌ ಬಿ. ಲೋಕೂರ್‌ ನೇತೃತ್ವದ ಪೀಠ ಆದೇಶಿಸಿತ್ತು.
ಆದರೆ, ಅರಣ್ಯ ಮತ್ತು ಲೋಕೋ
ಪಯೋಗಿ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿ
ಕಾರಿಗಳು ಸಲ್ಲಿಸಿದ ಅರ್ಜಿಯನ್ನು ವಿಚಾ
ರಣೆ ನಡೆಸಿದ ಅದೇ ಪೀಠ, ಬಿ.ಕೆ. ಪವಿತ್ರಾ ಮತ್ತಿತರರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾ
ರಣೆ ನಡೆಸುತ್ತಿರುವ ನ್ಯಾಯಮೂ
ರ್ತಿಗಳಾದ ಎ.ಕೆ. ಗೋಯಲ್‌ ಹಾಗೂ ಯು.ಯು. ಲಲಿತ್‌ ನೇತೃ
ತ್ವದ ಪೀಠಕ್ಕೆ ವರ್ಗಾಯಿಸಿದೆ ಎಂದು ಮೂಲಗಳು ತಿಳಿಸಿವೆ.
.



CLICK PHOT&JOIN: Karnataka government employee's News & Order's exchange Teligram GROUP

CLICK PHOT&JOIN: Karnataka government employee's News & Order's exchange Teligram GROUP
ಬಹಳ ಸದಸ್ಯರ ಒತ್ತಾಯದಮೇರೆಗೆ ಗುಂಪಿಗೆ ಮರುಚಾಲನೆ ನೀಡಲಾಗಿದೆ. ಕೆಟ್ಟ=ಟೀಕೆ,ಟಿಪ್ಪಣಿ,ಸ್ವಗತ ಇಲ್ಲಿ ನಿಷೇಧ, ಎಲ್ಲೋ ಕುಳಿತು ನಿಮ್ಮ ಬೆರಳು/ಯೋಚನೆ ಅಡ್ಮಿನ್ ನಿಯಂತ್ರಣ ಮಾಡಲು ಆಗಲ್ಲ, ಚರ್ಚಿಸುವ ಮುಂಚೆ ಯೋಚಿಸಿ ಪೋಸ್ಟ್ ಮಾಡಿ, ನೀವೂ ತೊಂದರೆಗೆ ಸಿಲುಕಬೇಡಿ, ಅಡ್ಮಿನಿಗೂ ತೊಂದರೆ ಕೊಡಬೇಡಿ. ಆರೋಗ್ಯಕರ ಚರ್ಚೆ, ಸಹಾಯ, ಸ್ನೇಹ ಗುಂಪಿನ ಗುರಿ. ಎಲ್ಲರೂ ಭಾಗವಹಿಸಲು ಪೋಸ್ಟ್ ಮಾಡುವ ಅವಕಾಶ ನೀಡಲಾಗಿದೆ. ನಿಯಮ ಮೀರುವ ಸದಸ್ಯರನ್ನು ಮುಲಾಜಿಲ್ಲದೇ ಹೊರಹಾಕಿ ಬ್ಲಾಕ್ ಮಾಡಲಾಗುವುದು ಇದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸುದ್ದಿ ಆದೇಶ ವಿನಿಮಯ ಟೆಲಿಗ್ರಾಂ ಗುಂಪಿನ ಆಹ್ವಾನ ಕೊಂಡಿ. ಮೇಲಿನ ಫೋಟೋ ಬೆರಳಿಂದ ತಟ್ಟುವ ಮುಖಾಂತರ ಗುಂಪಿಗೆ ನೀವೇ ಸೇರ್ಪಡೆ ಆಗಬಹುದು. ತಟ್ಟುವ ಮುಂಚೆ ಟೆಲಿಗ್ರಾಂ ಆಪ್ ಹಾಕಿಕೊಂಡು ತಟ್ಟಿ.