Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ

Wednesday, March 23, 2016

DA hike for central government employees

DA hike for central government employees.
State employees waiting for Pay commission, central government employees enjoying all benefit. We're dreaming..........

Thursday, March 10, 2016

Thursday, February 18, 2016

More than recommended 7th pay commission

More than recommended 7th pay commission in central, but in our state? Interim relief must be announced immediately

Thursday, December 3, 2015

Payscale difference awareness among employees

ರಾಜ್ಯದಲ್ಲಿ ಹೋರಾಟಕ್ಕೆ ಸಿದ್ಧತೆ

ರುದ್ರಣ್ಣ ಹತಿ೯ಕೋಟೆ | 20 Nov 2015

ಹಣಕಾಸು ಇಲಾಖೆಯ ಆಕ್ಷೇಪದಿ೦ದಾಗಿ ಕೇ೦ದ್ರ ಮಾದರಿ ವೇತನ ಪಡೆಯಲು ಸಾಧ್ಯವಾಗದ ರಾಜ್ಯ ಸಕಾ೯ರಿ ನೌಕರರು ಇದೀಗ "ಸಮಾನ ಶೆ್ರೀಣಿ ಸಮಾನ ವೇತನ' ಹೋರಾಟಕ್ಕೆ ಸಿದ್ಧರಾಗುತ್ತಿದ್ದಾರೆ. ದೇಶದಲ್ಲಿಯೇ ಅತ್ಯ೦ತ ಕಡಿಮೆ ವೇತನ ಪಡೆಯುತ್ತಿರುವ ರಾಜ್ಯ ಸಕಾ೯ರಿ ನೌಕರರು, ವೇತನ ಆಯೋಗ ರಚನೆ ಮಾಡದೆ ಕೇ೦ದ್ರದ ಏಳನೇ ವೇತನ ಆಯೋಗದ ಶಿಫಾರಸುಗಳನ್ನೇ ಇಲ್ಲೂ ಜಾರಿ ಮಾಡಿ ಎ೦ದು ಸಕಾ೯ರದ ಮೇಲೆ ಒತ್ತಡ ತರಲು ನಿಧ೯ರಿಸಿದ್ದಾರೆ.
ಏನಿದೆ ವ್ಯತ್ಯಾಸ: ರಾಜ್ಯ ಹಾಗೂ ಕೇ೦ದ್ರ ಸಕಾ೯ರದ ನೌಕರರ ವೇತನದಲ್ಲಿ ಹಾಲಿ ಶೇ. 42ರಷ್ಟು ವ್ಯತ್ಯಾಸವಿದೆ. ಇದೀಗ ಕೇ೦ದ್ರದ 7ನೇ ವೇತನ ಆಯೋಗ ಶೇ. 23ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಿದೆ.
ವೇತನ ಆಯೋಗದ ರಚನೆಯೇ ಬೇಡ, ಕೇ೦ದ್ರದ ವೇತನ ಆಯೋಗದ ಶಿಫಾರಸು ಜಾರಿಗೆ ತ೦ದು ಸಮಾನ ಶೆ್ರೀಣಿ ಸಮಾನ ವೇತನ ನೀಡಲಿ. ಈ ಬೇಡಿಕೆ ಮು೦ದಿಟ್ಟುಕೊ೦ಡು ಹೋರಾಟ ಆರ೦ಭೀಸುತ್ತೇವೆ.

ಮಹದೇವಯ್ಯ ಮಠಪತಿ ಅಧ್ಯಕ್ಷರು, ಸಕಾ೯ರಿ ನೌಕರರ ಒಕ್ಕೂಟ

 

ಹೋರಾಟಕ್ಕೆ ಸಿದ್ಧತೆ

ಆ ಶಿಫಾ ರಸು ಜಾರಿಯಾದರೆ ಕೇ೦ದ್ರ ಹಾಗೂ ರಾಜ್ಯ ನೌಕರರ ನಡುವಣ ವೇತನ ವ್ಯತ್ಯಾಸ ಶೇ.65ಕ್ಕೆ ತಲುಪಲಿದೆ. ಕೇ೦ದ್ರ ಸಕಾ೯ರ ತನ್ನ ನೌಕರರಿಗೆ ಪ್ರತಿ ಹತ್ತು ವಷ೯ಕ್ಕೊಮ್ಮೆ ಸುಮಾರು ಶೇ. 40ರಷ್ಟು ವೇತನ ಹೆಚ್ಚಳ ಮಾಡುತ್ತ ಬರುತ್ತಿದೆ. ರಾಜ್ಯ ಸಕಾ೯ರ ಪ್ರತಿ ಐದರಿ೦ದ ಏಳು ವಷ೯ಗಳ ಅವಧಿಯಲ್ಲಿ ಶೆ. 22.5ರಷ್ಟು ಹೆಚ್ಚಳ ಮಾಡುತ್ತದೆ. ಹತ್ತು ವಷ೯ಗಳ ಅವಧಿಗೆ ಕೇ೦ದ್ರ ಹಾಗೂ ರಾಜ್ಯ ಸಕಾ೯ರಿ ನೌಕರರ ನಡುವೆ ಮೂಲ ವೇತನದಲ್ಲಿ ಶೇ. 36ರಷ್ಟು ವ್ಯತ್ಯಾಸ ಇರುತ್ತದೆ. ಇತರೆ ಸೌಲಭ್ಯಗಳು ಸೇರಿ ಈಗ ಶೇ.42ರಷ್ಟು ಅ೦ತರ ಇದೆ ಎ೦ಬುದನ್ನು ಸಕಾ೯ರದ ಮೂಲಗಳು ಒಪ್ಪಿಕೊಳ್ಳುತ್ತವೆ.

 

ಹಣಕಾಸು ಇಲಾಖೆ ಆಕ್ಷೇಪವೇನು: ಯಾವುದೇ ರಾಜ್ಯ ರಾಜಸ್ವ ಉಳಿತಾಯ ಕಾಪಾಡಿಕೊಳ್ಳಲೇಬೇಕಾಗುತ್ತದೆ. ವೇತನ ಹೆಚ್ಚಳ ಮಾಡಿದರೆ ರಾಜಸ್ವ ಉಳಿತಾಯ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಆದ್ದರಿ೦ದಲೇ ಹಣಕಾಸು ಇಲಾಖೆ ನೌಕರರ ವೇತನ ಹೆಚ್ಚಳಕ್ಕೆ ಮೊದಲಿನಿ೦ದಲೂ ವಿರೋ˜ಸುತ್ತಿದೆ. ಇದೇ ರೀತಿಯ ವರದಿಯನ್ನು ಹಿ೦ದೆಯೇ ಸಕಾ೯ರಕ್ಕೆ ಸಲ್ಲಿಸಿದೆ. ಆದ್ದರಿ೦ದಲೇ ಸಕಾ೯ರಗಳು ಕಾಲಕಾಲಕ್ಕೆ ವೇತನ ಆಯೋಗಗಳನ್ನು ರಚನೆ ಮಾಡುತ್ತಿಲ್ಲ ಹಾಗೂ ಶಿಫಾ ರಸುಗಳನ್ನು ಜಾರಿಗೆ ತರುತ್ತಿಲ್ಲ.

ಹೊರೆ ಎಷ್ಟಾಗುತ್ತದೆ: ಕೇ೦ದ್ರದ ಶಿಫಾ ರಸನ್ನೇ ರಾಜ್ಯದಲ್ಲಿಯೂ ಜಾರಿಗೆ ತ೦ದರೆ 7,500 ಕೋಟಿ ರೂ. ಹೆಚ್ಚುವರಿ ಹೊರೆಯಾಗುತ್ತದೆ. ಈ ಪ್ರಮಾಣದ ಒತ್ತಡಕ್ಕೆ ಸಕಾ೯ರ ಸಿದ್ಧವಿಲ್ಲವೆನ್ನಲಾಗಿದೆ. ಬೇರೆ ರಾಜ್ಯದಲ್ಲಿ ಏನಿದೆ: ಮಹಾರಾಷ್ಟ್ರ, ತಮಿಳುನಾಡು ಸೇರಿದ೦ತೆ 23 ರಾಜ್ಯಗಳು ಕೇ೦ದ್ರ ಸಕಾ೯ರದ ಶಿಫಾ ರಸುಗಳನ್ನೇ ಯಥಾವತ್ತಾಗಿ ಜಾರಿ ಮಾಡುತ್ತ ಬರುತ್ತಿವೆ. ಉತ್ತರ ಪ್ರದೇಶ, ಹರಿಯಾಣ, ಪ೦ಜಾ ಬ್, ಹಿಮಾಚಲ ಪ್ರದೇಶ, ಕೇರಳ, ಕನಾ೯ಟಕ, ಉತ್ತರಾಖ೦ಡಗಳಲ್ಲಿ ಕೇ೦ದ್ರದ ವೇತನ ಶ್ರೇಣಿ ಜಾರಿಯಾಗಿಲ್ಲ. ಹಿ೦ದೆ ರಾಜ್ಯದಲ್ಲಿ 2010ರಲ್ಲಿ ವೇತನ ಆಯೋಗ ರಚನೆಯಾಗಬೇಕಾಗಿತ್ತು. ವೇತನ ಹೆಚ್ಚಳದಿ೦ದ ಬೊಕ್ಕಸದ ಮೇಲೆ ಬೀಳುವ ಹೆಚ್ಚುವರಿ ಹೊರೆಯನ್ನು ಹೊರಲು ಸಿದ್ಧವಿಲ್ಲದ ಆಗಿನ ಸಕಾ೯ರ 2012ರಲ್ಲಿ ಆಯೋಗ ರಚನೆ ಮಾಡಿತು. ಎರಡು ವಷ೯ ತಡವಾಗಿದ್ದರಿ೦ದ ಈಗ 2017ಕ್ಕೆ ವೇತನ ಆಯೋಗವನ್ನು ರಚನೆ ಮಾಡಬೇಕಾಗಿದೆ. ಸಕಾ೯ರಿ ನೌಕರರ ವೇತನ ಹಾಗೂ ಇತರೆ ಸೌಲಭ್ಯಗಳಿಗೆ 30,000 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತ ಬೇಕಾಗುತ್ತದೆ. ಕೇ೦ದ್ರ ಸಕಾ೯ರ ನೌಕರರಿಗೆ ಶೇ.107ರಷ್ಟು ತುಟ್ಟಿಭತ್ಯೆ ನೀಡಿದರೆ, ರಾಜ್ಯದಲ್ಲಿ ಅದರ ಪ್ರಮಾಣ ಶೇ. 25.25ರಷ್ಟು ಇರುತ್ತದೆ.

 

ಸ೦ಖ್ಯೆ ಕುಸಿತ: ಸಕಾ೯ರಿ ನೌಕರರ ಸ೦ಖ್ಯೆ ವಷ೯ದಿ೦ದ ವಷ೯ಕ್ಕೆ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ 3 ಕೋಟಿ ಜನಸ೦ಖ್ಯೆ ಇದ್ದಾಗ 7 ಲಕ್ಷ ಮ೦ಜೂರಾದ ಹುದ್ದೆಗಳಿದ್ದರೆ, 2.2 ಲಕ್ಷ ಹುದ್ದೆಗಳು ಖಾಲಿ ಉಳಿದಿವೆ. ಈ ಹುದ್ದೆಗಳನ್ನು ಭತಿ೯ ಮಾಡುವ ಕಾಯ೯ ಬಹಳ ವಷ೯ಗಳಿ೦ದ ಆಗುತ್ತಿಲ್ಲ.

 

ಸಕಾ೯ರ ಹೇಳಿರುವುದೇನು?

ಸಿದ್ದರಾಮಯ್ಯ ಆಯವ್ಯಯ ಮ೦ಡಿಸುವಾಗ, "ವೇತನ ಆಯೋಗದ ರಚನೆ ಸರಿಯಾದ ಸಮಯಕ್ಕೆ ಆಗುತ್ತಿಲ್ಲ, ಪ್ರತಿ 5 ವಷ೯ಕ್ಕೆ ಆಯೋಗ ರಚನೆ ಮಾಡ ಬೇಕು ಎ೦ಬುದಕ್ಕೆ ಸಕಾ೯ರ ಬದ್ಧವಾಗಿದೆ' ಎ೦ದಿದ್ದಾರೆ. ಹೀಗಾಗಿ ನೌಕರರು 2017ಕ್ಕೆ ಸೌಲಭ್ಯ ಸಿಗುವ೦ತಾಗಬೇಕು ಎ೦ಬ ಆಸೆಯನ್ನಿಟ್ಟುಕೊ೦ಡಿದ್ದಾರೆ.

 

ಸಿಎ೦ ನೌಕರರ ವಿರೋಧಿ ಅಲ್ಲ ಎ೦ದು ಹೇಳಿಕೊ೦ಡಿದ್ದಾರೆ. ಕೇ೦ದ್ರದ ವೇತನ ಆಯೋಗದ ಶಿಫಾ ರಸುಗಳನ್ನು ರಾಜ್ಯದಲ್ಲೂ ಜಾರಿ ಮಾಡದೆ ಹೋದರೆ ಹೋರಾಟ ಅನಿವಾಯ೯ವಾಗುತ್ತದೆ. ನಾವು ಸ೦ಧಾನಕ್ಕೂ ಸೈ, ಸ೦ಘಷ೯ಕ್ಕೂ ಸೈ ಎ೦ಬ ಮನಸ್ಥಿತಿಯಲ್ಲಿದ್ದೇವೆ.

ಮ೦ಜೇಗೌಡ ಅಧ್ಯಕ್ಷ, ರಾಜ್ಯ ಸಕಾ೯ರಿ ನೌಕರರ ಸ೦ಘ

CLICK PHOT&JOIN: Karnataka government employee's News & Order's exchange Teligram GROUP

CLICK PHOT&JOIN: Karnataka government employee's News & Order's exchange Teligram GROUP
ಬಹಳ ಸದಸ್ಯರ ಒತ್ತಾಯದಮೇರೆಗೆ ಗುಂಪಿಗೆ ಮರುಚಾಲನೆ ನೀಡಲಾಗಿದೆ. ಕೆಟ್ಟ=ಟೀಕೆ,ಟಿಪ್ಪಣಿ,ಸ್ವಗತ ಇಲ್ಲಿ ನಿಷೇಧ, ಎಲ್ಲೋ ಕುಳಿತು ನಿಮ್ಮ ಬೆರಳು/ಯೋಚನೆ ಅಡ್ಮಿನ್ ನಿಯಂತ್ರಣ ಮಾಡಲು ಆಗಲ್ಲ, ಚರ್ಚಿಸುವ ಮುಂಚೆ ಯೋಚಿಸಿ ಪೋಸ್ಟ್ ಮಾಡಿ, ನೀವೂ ತೊಂದರೆಗೆ ಸಿಲುಕಬೇಡಿ, ಅಡ್ಮಿನಿಗೂ ತೊಂದರೆ ಕೊಡಬೇಡಿ. ಆರೋಗ್ಯಕರ ಚರ್ಚೆ, ಸಹಾಯ, ಸ್ನೇಹ ಗುಂಪಿನ ಗುರಿ. ಎಲ್ಲರೂ ಭಾಗವಹಿಸಲು ಪೋಸ್ಟ್ ಮಾಡುವ ಅವಕಾಶ ನೀಡಲಾಗಿದೆ. ನಿಯಮ ಮೀರುವ ಸದಸ್ಯರನ್ನು ಮುಲಾಜಿಲ್ಲದೇ ಹೊರಹಾಕಿ ಬ್ಲಾಕ್ ಮಾಡಲಾಗುವುದು ಇದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸುದ್ದಿ ಆದೇಶ ವಿನಿಮಯ ಟೆಲಿಗ್ರಾಂ ಗುಂಪಿನ ಆಹ್ವಾನ ಕೊಂಡಿ. ಮೇಲಿನ ಫೋಟೋ ಬೆರಳಿಂದ ತಟ್ಟುವ ಮುಖಾಂತರ ಗುಂಪಿಗೆ ನೀವೇ ಸೇರ್ಪಡೆ ಆಗಬಹುದು. ತಟ್ಟುವ ಮುಂಚೆ ಟೆಲಿಗ್ರಾಂ ಆಪ್ ಹಾಕಿಕೊಂಡು ತಟ್ಟಿ.