Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ

Thursday, December 14, 2017

ಹೀಗಾಗುತ್ತಿಲ್ಲ!!!!! ಮತ್ತೇನಾಗುತ್ತಿದೆ?

ಹಿಂಬಡ್ತಿ ಮತ್ತು ಮುಂಬಡ್ತಿ ಪ್ರಕ್ರಿಯೆ ಮುಗಿಸಲು ಕೋರ್ಟ್‌ ನಿರ್ದೇಶನ ನೀಡಿದೆ. ಹೀಗಾಗುತ್ತಿಲ್ಲ!!!!! ಮತ್ತೇನಾಗುತ್ತಿದೆ?

ಈಗ ಕೆಲವೇ ಇಲಾಖೆ ಹೊರತುಪಡಿಸಿ, ಬಹುತೇಕ ಎಲ್ಲಾ ಹೊರಡಿಸಿರುವ ಎಲ್ಲ ಜೇಷ್ಠತಾ ಪಟ್ಟಿಗಳಲ್ಲಿ ಹಳೆಯ 1978 ರಿಂದ ಮೀಸಲಾತಿಯಲ್ಲಿ ಮುಂಬಡ್ತಿ ಹೊಂದಿದವರ, ಈ ಪರಿಣಾಮದಂದಾಗಿ ತೊಂದರೆಗೊಳಗಾದವರ ಪ್ರತಿ ವೃಂದದಲ್ಲಿ ಆಗಿರುವ ಬದಲಾವಣೆ ಮಾಹಿತಿ ಪ್ರಸ್ತಾಪವೇ ಇಲ್ಲ. ಎಲ್ಲ ಇಲಾಖೆಯವರು, ಸಧ್ಯದ ಹಾಲಿ 2017 ರಂತೆ, ಎಲ್ಲ ಕರಡು ನಿರ್ವಾಹಕರು ಅವರವರ ವೃಂದದ್ದು ಮಾತ್ರ, ಜೇಷ್ಠತಾ ಪಟ್ಟಿ ಕಳಿಸಿ, ವೆಬ್ಸೈಟ್ ನಲ್ಲಿ ಪ್ರಚುರಪಡಿಸಿ, ಆಕ್ಷೇಪಣೆ(?) ಆಹ್ವಾನಿಸಿ, ಕೈ ತೊಳೆದುಕೊಂಡು ಜಾಣ ಕುರುಡು ಪ್ರದರ್ಶಿಸಿದ್ದಾರೆ. ಹಾಲಿ ಪಟ್ಟಿಯಲ್ಲಿ ಏನು ಗೊತ್ತಾಗುತ್ತದೋ ದೇವರೇ ಬಲ್ಲ!!!. ಹಾಲಿ ಪಟ್ಟಿಯಲ್ಲಿ ಎಲ್ಲವೊ ಸರಿಯಾಗಿರುತ್ತದೆ. ವೃಂದ ಬದಲಾವಣೆಯ ವಿಷಯವೇ ಅಲ್ಲಿರುವುದಿಲ್ಲ. ಏಕೆಂದರೆ ಮುಂಬಡ್ತಿ, ಬಡ್ತಿ ಮೇಲೆ ಬಡ್ತಿ  ಪಡೆದವರು ಅವರಾಗಲೇ ಮುಂದಿನ-ಮುಂದಿನ ವೃ0ದದಲ್ಲಿರುತ್ತಾರೆ. ಅಲ್ಲಿ ಹಾಲಿ ಅವರ ಸ್ಥಾನ ಮಾತ್ರ ಕಾಣಿಸಲಾಗಿರುತ್ತದೆ. ಕಳೆದ 39  ವರ್ಷಗಳಿಂದ ಇದನ್ನು ಸೂಕ್ಷ್ಮವಾಗಿ ಗಮನಿಸಿಕೊಂಡು ಬಂದಿರುವ ನೌಕರರಿಗೆ, ಇದರಿಂದ ನೊಂದವರಿಗೆ ಮಾತ್ರ ಇದು ಗೊತ್ತಿರಲು ಸಾಧ್ಯ. ಈ ಬಗ್ಗೆ ತಿಳಿದಿದ್ದರೂ ರಾಜ್ಯದ ಎಲ್ಲ ನೌಕರರು ಏನು ಮಾಡಬೇಕು ಎಂದು ತೋಚದೆ ಕುಳಿತಿದ್ದಾರೆ. ಏಕೆಂದರೆ ಆಕ್ಷೇಪಣೆ ಕೇಳಿರುವುದು 2017 ಹಾಲಿ ಜ್ಯೇಷ್ಠತಾ ಪಟ್ಟಿಯಲ್ಲಿ ದೋಷ ಇದ್ದರೆ ಹೇಳಿ ಎಂದು, ಅದರಲ್ಲಿ ಏನಿದೆ? ಹೇಳಲು!!

ಈಗ ಹಿಂಬಡ್ತಿಇಲ್ಲ, ಜೇಷ್ಠತಾ ಪಟ್ಟಿ ಪರಿಷ್ಕರಣೆಯಿಂದ ಪ್ರತಿ ವೃಂದದಲ್ಲಿ ಆಗಿರುವ ಬದಲಾವಣೆ ಮಾಹಿತಿ ಒಳಗೊಂಡು ಪರಿಷ್ಕೃತ ಪಟ್ಟಿ ಇಲ್ಲ, ಸ್ಪಷ್ಟವಾಗಿರುವ ಸುತ್ತೋಲೆಯ ಮುಖ್ಯಾಂಶವನ್ನು ಗಮನಿಸದಂತೆ ಹಾಲಿ ಪಟ್ಟಿಯಲ್ಲಿಯೇ ಖಾಲಿ ಇರುವ ಸ್ಥಾನಗಳಿಗೆ ಮಾತ್ರ ಮುಂಬಡ್ತಿ ನೀಡುವ ತಂತ್ರ ಜಾರಿಯಲ್ಲಿದೆ. 

FROM OLDER POSTS

From old post
Thursday, September 21, 2017
SC ST promotion issue present status
ಪರಿಶಿಷ್ಟರ ಬಡ್ತಿ ಮೀಸಲು ರದ್ದು ಪ್ರಕರಣ: ಪರಿಷ್ಕೃತ ಜೇಷ್ಠತಾ ಪಟ್ಟಿ ಸಿದ್ಧತೆಗೆ ಸೂಚನೆ
Vijaya Karnataka | Updated Sep 21, 2017, 08:22 AM IST
ಬೆಂಗಳೂರು: ಬಡ್ತಿ ಮೀಸಲು ವಿಚಾರದಲ್ಲಿ ಸುಪ್ರೀಂಕೋರ್ಟ್‌ ತೀರ್ಪಿನಂತೆ ಪರಿಷ್ಕೃತ ಜೇಷ್ಠತಾ ಪಟ್ಟಿ ಸಿದ್ಧಪಡಿಸಿ ಸಲ್ಲಿಸುವಂತೆ ಎಲ್ಲ ಇಲಾಖಾ ಮುಖ್ಯಸ್ಥರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್‌) ಸೂಚಿಸಿದೆ.

ಈ ಸಂಬಂಧ ಡಿಪಿಎಆರ್‌ ಕಾರ್ಯದರ್ಶಿ ಟಿ.ಕೆ.ಅನಿಲ್‌ ಕುಮಾರ್‌ ಅವರು ಎಲ್ಲ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳಿಗೆ ಸುತ್ತೋಲೆ ರವಾನಿಸಿದ್ದಾರೆ.

ಪರಿಶಿಷ್ಟರ ಬಡ್ತಿ ಮೀಸಲು ರದ್ದುಪಡಿಸಿ ಕಳೆದ ಫೆಬ್ರವರಿ 9ರಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು. ಅರ್ಹತೆ ಮತ್ತು ಸೇವಾ ಹಿರಿತನದ ಮೇಲೆ ಹೊಸದಾಗಿ ಜೇಷ್ಠತಾ ಪಟ್ಟಿ ಸಿದ್ಧಪಡಿಸಿ ಮುಂಬಡ್ತಿ, ಹಿಂಬಡ್ತಿ ಪ್ರಕ್ರಿಯೆ ನಿರ್ವಹಿಸಲು ನಿರ್ದೇಶನ ನೀಡಿತ್ತು. ಆದರೆ, ತೀರ್ಪಿನ ಅನುಷ್ಠಾನಕ್ಕೆ ನೀಡಲಾಗಿದ್ದ ಆರು ತಿಂಗಳ ಗಡುವು ಮೀರಿದರೂ ಆದೇಶ ಪಾಲನೆ ಆಗಿರಲಿಲ್ಲ. ಈ ಸಂಬಂಧ ನ್ಯಾಯಾಂಗ ನಿಂದನೆ ಅರ್ಜಿಗಳು ಕಳೆದ ಸೆ.8 ರಂದು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಂದ ಸಂದರ್ಭದಲ್ಲಿ ರಾಜ್ಯ ಸರಕಾರ ಮತ್ತಷ್ಟು ಕಾಲಾವಕಾಶಕ್ಕೆ ಕೋರಿಕೆ ಸಲ್ಲಿಸಿತ್ತು.

ಜೇಷ್ಠತಾ ಪಟ್ಟಿ ಸಿದ್ಧಪಡಿಸಲು ನವೆಂಬರ್‌ 30ರವರೆಗೆ ಸುಪ್ರೀಂಕೋರ್ಟ್‌ ಗಡುವು ವಿಸ್ತರಿಸಿದ್ದು, ಈಗಾಗಲೇ ಜೇಷ್ಠತಾ ಪಟ್ಟಿ ಸಿದ್ಧವಾಗಿರುವ ಇಲಾಖೆಗಳಲ್ಲಿ ವಿಸ್ತರಣಾ ದಿನಾಂಕದವರೆಗೆ ಕಾಯದೆ ಈ ಮುಂಚಿನ ಆದೇಶದಂತೆ ಹಿಂಬಡ್ತಿ ಮತ್ತು ಮುಂಬಡ್ತಿ ಪ್ರಕ್ರಿಯೆ ಮುಗಿಸಲು ಕೋರ್ಟ್‌ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಇಲಾಖಾವಾರು ಜೇಷ್ಠತಾ ಪಟ್ಟಿ ಸಿದ್ಧಪಡಿಸಲು ಎಲ್ಲ ಇಲಾಖಾ ಮುಖ್ಯಸ್ಥರಿಗೆ ಡಿಪಿಎಆರ್‌ ಇಲಾಖೆ ಸುತ್ತೋಲೆ ರವಾನಿಸಿದೆ.

''ಎಲ್ಲ ಇಲಾಖೆಗಳ ಮುಖ್ಯಸ್ಥರು ಸುಪ್ರೀಂಕೋರ್ಟ್‌ ನಿರ್ದೇಶನದಂತೆ ತಮ್ಮ ಇಲಾಖೆ ಮತ್ತು ಇಲಾಖೆ ವ್ಯಾಪ್ತಿಗೊಳಪಡುವ ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯ, ಆಯೋಗ, ನಿಗಮ, ಮಂಡಳಿ, ಸ್ಥಳೀಯ ಸಂಸ್ಥೆ ಹಾಗೂ ಸರಕಾರದ ಅನುದಾನದಿಂದ ನಡೆಯುವ ಸಂಸ್ಥೆಗಳಲ್ಲಿ ಜೇಷ್ಠತಾ ಪಟ್ಟಿ ಪರಿಷ್ಕರಣೆ ಮಾಡಬೇಕು. ಜೇಷ್ಠತಾ ಪಟ್ಟಿ ಪರಿಷ್ಕರಣೆಯಿಂದ ಪ್ರತಿ ವೃಂದದಲ್ಲಿ ಆಗಿರುವ ಬದಲಾವಣೆ ಮಾಹಿತಿ ಒಳಗೊಂಡು ಪರಿಷ್ಕೃತ ಪಟ್ಟಿಯನ್ನು ಶೀಘ್ರ ಡಿಪಿಎಆರ್‌ಗೆ ತಲುಪಿಸಬೇಕು'' ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಬಹುತೇಕ ಎಲ್ಲ ಇಲಾಖಾ ಜೇಶ್ಟತಾ ಪಟ್ಟಿ ಪ್ರಚುರ ಪಡಿಸಿದರೂ ಈ ಮೇಲ್ನನಂತಹ ಸುದ್ದಿ ಚಿತ್ರಗಳ ಪ್ರತಿಕ್ರಿಯೆ, ಹಿಂಭಡ್ತಿ ಸಂಚಲನ ಮೂಡಿಲ್ಲ ಎಂಬುದು ಗಮನಿಸಿ


Sunday, November 19, 2017

Good services appreciated

During private hospital strike,all government and atonomous hospitals served their level best. hattsoff

CLICK PHOT&JOIN: Karnataka government employee's News & Order's exchange Teligram GROUP

CLICK PHOT&JOIN: Karnataka government employee's News & Order's exchange Teligram GROUP
ಬಹಳ ಸದಸ್ಯರ ಒತ್ತಾಯದಮೇರೆಗೆ ಗುಂಪಿಗೆ ಮರುಚಾಲನೆ ನೀಡಲಾಗಿದೆ. ಕೆಟ್ಟ=ಟೀಕೆ,ಟಿಪ್ಪಣಿ,ಸ್ವಗತ ಇಲ್ಲಿ ನಿಷೇಧ, ಎಲ್ಲೋ ಕುಳಿತು ನಿಮ್ಮ ಬೆರಳು/ಯೋಚನೆ ಅಡ್ಮಿನ್ ನಿಯಂತ್ರಣ ಮಾಡಲು ಆಗಲ್ಲ, ಚರ್ಚಿಸುವ ಮುಂಚೆ ಯೋಚಿಸಿ ಪೋಸ್ಟ್ ಮಾಡಿ, ನೀವೂ ತೊಂದರೆಗೆ ಸಿಲುಕಬೇಡಿ, ಅಡ್ಮಿನಿಗೂ ತೊಂದರೆ ಕೊಡಬೇಡಿ. ಆರೋಗ್ಯಕರ ಚರ್ಚೆ, ಸಹಾಯ, ಸ್ನೇಹ ಗುಂಪಿನ ಗುರಿ. ಎಲ್ಲರೂ ಭಾಗವಹಿಸಲು ಪೋಸ್ಟ್ ಮಾಡುವ ಅವಕಾಶ ನೀಡಲಾಗಿದೆ. ನಿಯಮ ಮೀರುವ ಸದಸ್ಯರನ್ನು ಮುಲಾಜಿಲ್ಲದೇ ಹೊರಹಾಕಿ ಬ್ಲಾಕ್ ಮಾಡಲಾಗುವುದು ಇದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸುದ್ದಿ ಆದೇಶ ವಿನಿಮಯ ಟೆಲಿಗ್ರಾಂ ಗುಂಪಿನ ಆಹ್ವಾನ ಕೊಂಡಿ. ಮೇಲಿನ ಫೋಟೋ ಬೆರಳಿಂದ ತಟ್ಟುವ ಮುಖಾಂತರ ಗುಂಪಿಗೆ ನೀವೇ ಸೇರ್ಪಡೆ ಆಗಬಹುದು. ತಟ್ಟುವ ಮುಂಚೆ ಟೆಲಿಗ್ರಾಂ ಆಪ್ ಹಾಕಿಕೊಂಡು ತಟ್ಟಿ.