Search in ThisBlogಈಬ್ಲಾಗಲ್ಲಿ ವಿಷಯ ಹುಡುಕಿ

Friday, May 1, 2015

Jyotisaneevini clarification

Kannadigara balaga what's app group, teachers and Govt employees

ಜ್ಯೋತಿ ಸಂಜೀವಿನಿ ಯೋಜನೆ
(ಎಲ್ಲ ನೌಕರ ಬಾಂಧವರು ಕಡ್ಡಾಯವಾಗಿ ಓದಬೇಕಾದ ವಿಷಯ)
ಸರ್ಕಾರವು  ಸರ್ಕಾರಿ ನೌಕರರ ಬಾಂಧವರ ಸಲುವಾಗಿ   ಜ್ಯೋತಿ ಸಂಜೀವಿನಿ ಯೋಜನೆಯನ್ನು ಜಾರಿಗೆ ತಂದಿರುವುದು ಎಲ್ಲ ನೌಕರ ಬಾಂಧವರಿಗೆ ತಿಳಿದಿರುವ ವಿಷಯವಾಗಿದೆ. ಈ ಯೋಜನೆಯಡಿಯಲ್ಲಿ ಒಟ್ಟು 09 ಚಿಕಿತ್ಸೆಗಳಿಗೆ ನಗದು ರಹಿತ ಚಿಕಿತ್ಸೆ ಪಡೆಯಲು ಅವಕಾಶವಿರುತ್ತದೆ. ಈ 09 ಚಿಕಿತ್ಸೆಗಳಿಗೆ ವೈದ್ಯಕೀಯ ವೆಚ್ಚದ ಮರುಪಾವತಿಗೆ ಅವಕಾಶವಿರುವುದಿಲ್ಲ. ಚಿಕಿತ್ಸಾ ವೆಚ್ಚವನ್ನು ಭರಿಸಲು ಸರ್ಕಾರವು ಸುವರ್ಣ ಆರೋಗ್ಯ ಟ್ರಸ್ಟಗೆ ವಹಿಸಿಕೊಡಲಾಗಿದೆ. ಸರ್ಕಾರದ ವಾಜಪೇಯಿ ಆರೋಗ್ಯಶ್ರೀ ಯೋಜನೆಯನ್ನು ಅನುಷ್ಠಾನಗೊಳಿಸುವುದು ಸಹ ಇದೇ ಟ್ರಸ್ಟನ ಜವಾಬ್ದಾರಿಯಾಗಿರುತ್ತದೆ. ಇದರಡಿಯಲ್ಲಿ ಅರ್ಹ ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಉಚಿತವಾಗಿ ಅನುಮೋದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ.  ಹೀಗಾಗಿ ಸರ್ಕಾರಿ ನೌಕರರಿಗೂ ನೀಡುವ ಚಿಕಿತ್ಸಾ ವೆಚ್ಚ & ಬಿಪಿಎಲ್ ಪಡಿತರ ಚೀಟಿದಾರರಿಗೆ ನೀಡುವ ಚಿಕಿತ್ಸಾ ವೆಚ್ಚ ಎರಡು ಒಂದೇ ಆಗಿವೆ. ಇರುವ ಒಂದೇ ವ್ಯತ್ಯಾಸವೆಂದರೆ ನೌಕರರ ಮೂಲ ವೇತನಕ್ಕೆ ಅನುಗುಣವಾಗಿ ಜನರಲ್ ವಾರ್ಡ, ಸೆಮಿ ಪ್ರೈವೆಟ್ ವಾರ್ಡ, ವಿಶೇಷ ವಾರ್ಡಗಳ ಸೌಲಭ್ಯವನ್ನು ಪಡೆಯಬಹುದಾಗಿರುತ್ತದೆ.
ಇನ್ನು ಸರಕಾರದ ಜ್ಯೋತಿ ಸಂಜೀವಿನಿ ಯೋಜನೆಯ ನಗದು ರಹಿತ ಚಿಕಿತ್ಸೆಯ  ವಿವರ ಈ ಮುಂದಿನಂತಿದೆ ನೋಡಿ,  ನೌಕರ Heart Attack ಗೆ ಈಡಾಗಿ ಟ್ರಸ್ಟನಿಂದ ಒಡಂಬಡಿಕೆ ಪತ್ರಕ್ಕೆ ರುಜು ಮಾಡಿದ Multi Speciality Hospital ಗೆ ಒಳ ರೋಗಿಯಾಗಿ ದಾಖಲಾದಲ್ಲಿ  ಆತ OPD ವೆಚ್ಚದ ಜೊತೆಗೆ ತುರ್ತು ಚಿಕಿತ್ಸೆಯ ವೆಚ್ಚವನ್ನು ಭರಿಸಬೇಕು, ಇದಾದ ವೈದ್ಯರ ಸಲಹೆ ಮೇರೆಗೆ  ಕೈಗೊಳ್ಳುವ ಆಂಜಿಯೋಗ್ರಾಂ ವೆಚ್ಚವನ್ನು ನೌಕರರೇ ಭರಿಸಬೇಕು,  ಹೀಗಾಗಿ ಈ ಎಲ್ಲ ಚಿಕಿತ್ಸೆಗೆ  ತಗಲುವ ಮೊತ್ತ ರೂ 20,000.00 ನಂತರ ನಮ್ಮನೌಕರ ಬಾಂಧವನ ಹ್ರದಯದಲ್ಲಿ ಬ್ಲಾಕ ಇವೆ ಎಂದು ದ್ರಡಪಟ್ಟಲ್ಲಿ ಆವಾಗ   ಆ ಆಸ್ಪತ್ರೆಯಲ್ಲಿರುವ ಆರೋಗ್ಯ ಮಿತ್ರ ರ ಸಹಾಯದಿಂದ  ಎಲ್ಲ ದಾಖಲೆಗೊಂದಿಗೆ ಸುವರ್ಣ ಆರೋಗ್ಯ ಸುರಕ್ಷಾ  ಟ್ರಸ್ಟ ಬೆಂಗಳೂರಿಗೆ Online ಮುಖಾಂತರ ಮಂಜೂರಾತಿಗೆ ಕಳುಹಿಸಬೇಕು, ಟ್ರಸ್ಟನಿಂದ 3-ದಿನಗಳು ಕಳೆದ ನಂತರ PreAuth  ನಡಿಯಲ್ಲಿ ಟ್ರಸ್ಟ ಭರಿಸುವ ಮೊತ್ತ Code 240 ಅಡಿ ಚಿಕಿತ್ಸಾ ವೆಚ್ಚವಾಗಿ ರೂ 60,500.00 + Drug Eluting Stent ಸಲುವಾಗಿ 35,000.00  ಹೀಗೆ ಒಟ್ಟು ರೂ 95,500.00 ಮಂಜೂರಾತಿ ನೀಡಲಾಗುತ್ತದೆ. (ಟ್ರಸ್ಟನಿಂದ ಮಂಜೂರಾಗಿ PreAuth ಬರುವರೆಗೂ ಆಸ್ಪತ್ರೆಯಲ್ಲಿ ಕಾಲ ಕಳೆಯಬೇಕು)  ವಾಜಪೇಯಿ ಆರೋಗ್ಯ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೂ ಸಹ ಇದೇ Stent ಬಳಸಲಾಗುತ್ತದೆ. ಹೀಗಾಗಿ ಸರ್ಕಾರಿ ನೌಕರರು ಸಹ BPL ಪಡಿತರ ಚೀಟಿದಾರರಂತೆ ಚಿಕಿತ್ಸೆಯನ್ನು ಪಡೆಯಬೇಕಾಗಿರುತ್ತದೆ. ಆದರೆ ಚಿಕಿತ್ಸೆ ನಿಡುತ್ತಿರುವ  ಆಸ್ಪತ್ರೆಯವರು ಟ್ರಸ್ಟನಿಂದ ನೀಡಲಾಗುವ Stent ಉತ್ತಮ ದರ್ಜೆಯದ್ದಾಗಿರುವುದಿಲ್ಲವೆಂದು ಎಂದು ತಿಳಿಸಿ ಹೆಚ್ಚುವರಿಯಾಗಿ ರೂ 40,000.00 ಭರಿಸಲು ಸೂಚಿಸುತ್ತಾರೆ. ಆಗ ನೌಕರ ಬಾಂಧವರು ಅನಿವಾರ್ಯವಾಗಿ ಹೆಚ್ಚುವರಿ ಮೊತ್ತವನ್ನು ಭರಿಸಬೇಕಾಗುತ್ತದೆ. ಇಲ್ಲವಾದಲ್ಲಿ ಟ್ರಸ್ಟ ನೀಡುವ Stent ಅನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.  
ಹೀಗಾಗಿ ನೌಕರ ಬಾಂಧವರು ಹ್ರದಯ ರೋಗದ ಚಿಕಿತ್ಸೆಯ ಸಲುವಾಗಿ OPD ಮತ್ತು ಆಂಜಿಯೋಗ್ರಾಂ ಇವುಗಳಿಗೆ ವೆಚ್ಚ ಮಾಡುವ ಮೊತ್ತ ರೂ 20,000.00 ಮತ್ತು ಉತ್ತಮ ದರ್ಜೆಯ Stent ಸಲುವಾಗಿ ನೀಡುವ ವೆಚ್ಚ ರೂ 40,000.00 ಈ ಮೊತ್ತವು ಸರ್ಕಾರದಿಂದ ಮರು ಪಾವತಿಯಾಗುವುದಿಲ್ಲ. ಟ್ರಸ್ಟ ನೀಡುವ ರೂ 95,500.00 ಮೊತ್ತವೇ ಅಂತಿಮವಾಗಿರುತ್ತದೆ. ಇದಲ್ಲದೆ ಆಸ್ಪತ್ರೆಯಿಂದ ಡಿಸ್ಚಾರ್ಜ ಆದ ನಂತರ ಔಷದಿಯ ವೆಚ್ಚವನ್ನು ನೌಕರರು ತನ್ನ ಸಂಬಳದಿಂದ ಭರಿಸಬೇಕಾಗಿರುತ್ತದೆ.
ಸರಕಾರದಿಂದ ಈ ಮೊದಲು ದೊರೆಯುತ್ತಿದ್ದ ವೈದ್ಯಕೀಯ ವೆಚ್ಚ ಮರುಪಾವತಿ ಯೋಜನೆಯು ಉತ್ತಮವಾಗಿದ್ದು, ಅದರಡಿಯಲ್ಲಿ ನೌಕರರು ಚಿಕಿತ್ಸೆಗಾಗಿ ವೆಚ್ಚ ಮಾಡಿದ ಪೂರ್ಣ ಮೊತ್ತವನ್ನು ಅಂದರೆ ಈ ಮೇಲ್ಕಾಣಿಸಿದ  ರೂ 1,65,000.00 ಮರುಪಾವತಿ ಮಾಡಿಕೊಳ್ಳಲು ಅವಕಾಶವಿರುತ್ತದೆ. ಈಗ ಜ್ಯೋತಿ ಸಂಜೀವಿನಿ ಯೋಜನೆಯು ಜಾರಿಗೆ ಬಂದಿರುವುದರಿಂದ ಈ ಅವಕಾಶ ಕೈ ತಪ್ಪಿಹೋಗಿರುತ್ತದೆ. ಆದುದರಿಂದ ಎಲ್ಲ ನೌಕರ ಬಾಂಧವರಿಗೆ ಈ ಮೊದಲಿನಂತೆ ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ಮುಂದುವರೆಸುವುದು ಅವಶ್ಯಕವಾಗಿರುತ್ತದೆ. ಈ ವಿಷಯವನ್ನು ಎಲ್ಲ ನೌಕರರಿಗೆ Share ಮಾಡಿ, ಎಲ್ಲರಿಗೂ ತಿಳಿಸಿ,  ಮತ್ತು ಈ ವಿಷಯದ ಸತ್ಯತೆ ಕುರಿತು ಸಂಶಯವಿದ್ದಲ್ಲಿ ಸದರ ಯೋಜನೆಯಡಿ ಚಿಕಿತ್ಸೆ ಪಡೆದ ನೌಕರ ಬಾಂಧವರಿಂದ ಈ ವಿಷಯವನ್ನು ಖಾತ್ರಿಪಡಿಸಿಕೊಳ್ಳಿ

CLICK PHOT&JOIN: Karnataka government employee's News & Order's exchange Teligram GROUP

CLICK PHOT&JOIN: Karnataka government employee's News & Order's exchange Teligram GROUP
ಬಹಳ ಸದಸ್ಯರ ಒತ್ತಾಯದಮೇರೆಗೆ ಗುಂಪಿಗೆ ಮರುಚಾಲನೆ ನೀಡಲಾಗಿದೆ. ಕೆಟ್ಟ=ಟೀಕೆ,ಟಿಪ್ಪಣಿ,ಸ್ವಗತ ಇಲ್ಲಿ ನಿಷೇಧ, ಎಲ್ಲೋ ಕುಳಿತು ನಿಮ್ಮ ಬೆರಳು/ಯೋಚನೆ ಅಡ್ಮಿನ್ ನಿಯಂತ್ರಣ ಮಾಡಲು ಆಗಲ್ಲ, ಚರ್ಚಿಸುವ ಮುಂಚೆ ಯೋಚಿಸಿ ಪೋಸ್ಟ್ ಮಾಡಿ, ನೀವೂ ತೊಂದರೆಗೆ ಸಿಲುಕಬೇಡಿ, ಅಡ್ಮಿನಿಗೂ ತೊಂದರೆ ಕೊಡಬೇಡಿ. ಆರೋಗ್ಯಕರ ಚರ್ಚೆ, ಸಹಾಯ, ಸ್ನೇಹ ಗುಂಪಿನ ಗುರಿ. ಎಲ್ಲರೂ ಭಾಗವಹಿಸಲು ಪೋಸ್ಟ್ ಮಾಡುವ ಅವಕಾಶ ನೀಡಲಾಗಿದೆ. ನಿಯಮ ಮೀರುವ ಸದಸ್ಯರನ್ನು ಮುಲಾಜಿಲ್ಲದೇ ಹೊರಹಾಕಿ ಬ್ಲಾಕ್ ಮಾಡಲಾಗುವುದು ಇದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸುದ್ದಿ ಆದೇಶ ವಿನಿಮಯ ಟೆಲಿಗ್ರಾಂ ಗುಂಪಿನ ಆಹ್ವಾನ ಕೊಂಡಿ. ಮೇಲಿನ ಫೋಟೋ ಬೆರಳಿಂದ ತಟ್ಟುವ ಮುಖಾಂತರ ಗುಂಪಿಗೆ ನೀವೇ ಸೇರ್ಪಡೆ ಆಗಬಹುದು. ತಟ್ಟುವ ಮುಂಚೆ ಟೆಲಿಗ್ರಾಂ ಆಪ್ ಹಾಕಿಕೊಂಡು ತಟ್ಟಿ.